• March 16, 2026

ವಿದೇಶ ಪ್ರವಾಸದ ವೇಳೆ ಕಾಲು ಮುರಿದುಕೊಂಡು ಮನೆಗೆ ವಾಪಸ್ ಆದ ನಟಿ ತ್ರಿಷಾ

ಪೊನ್ನಿಯನ್ ಸೆಲ್ವರ್ ಸಕ್ಸಸ್ ಬಳಿಕ ನಟಿ ತ್ರಿಷಾ ಕೃಷ್ಣನ್ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಕಾಲು ಮುರಿದುಕೊಂಡ ಕಾರಣ ತ್ರಿಷಾ ವಿದೇಶ ಪ್ರಯಾಣದಿಂದ ವಾಪಸ್ ಆಗಿದ್ದು ಸದ್ಯ ಮನೆಯಲ್ಲಿ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ತ್ರಿಷಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕಾಲಿಗೆ ಬ್ಯಾಂಡೇಜ್ ಮಾಡಿರುವ ಫೋಟೋ ಹಂಚಿಕೊಂಡಿರುವ ತ್ರಿಷಾ ಅಪಘಾತವಾದ ಕಾರಣ ವೆಕೇಶನ್‌ನಿಂದ ವಾಪಸ್ ಬರಬೇಕಾಯಿತು ಎಂದಿದ್ದಾರೆ. ತ್ರಿಷಾಗೆ ಅಪಘಾತವಾದ ಸುದ್ದಿ ತಿಳಿದ ಅಭಿಮಾನಿಗಳು ಕಂಗಾಲಾಗಿದ್ದು ಆದಷ್ಟು ಬೇಗ ಚೇತರಿಸಿಕೊಳ್ಳಿ ಎಂದಿದ್ದಾರೆ. 2002ರಲ್ಲಿ ತೆರೆಕಂಡ ತಮಿಳಿನ ಮೌನಂ ಪೆಸಿಯಾದೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ತ್ರಿಷಾ ಬಹುಭಾಷಾ ನಟಿಯಾಗಿ ಸದ್ದು ಮಾಡುತ್ತಿದ್ದಾರೆ. ಸಾಕಷ್ಟು ಸ್ಟಾರ್ ನಟರ ಜೊತೆ ತೆರೆ  ಹಂಚಿಕೊಂಡಿರುವ ತ್ರಿಷಾ ಕನ್ನಡದಲ್ಲಿ ಸಿನಿಮಾ ಮಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಜೊತೆ ಪವರ್ ಚಿತ್ರದಲ್ಲಿ ನಟಿಸಿದ್ದ ತ್ರಿಷಾ ದ್ವೀತ್ವ ಚಿತ್ರದಲ್ಲಿ ಅಪ್ಪು ಜೊತೆ ನಟಿಸಬೇಕಿತ್ತು. ಆದರೆ ಪುನೀತ್ ನಿಧನದಿಂದ  ಅದು ಸಾಧ್ಯವಾಗಿಲ್ಲ. ಸದ್ಯ ತ್ರಿಷಾ ನಟನೆಯ ಪೊನ್ನಿಯನ್ ಸೆಲ್ವನ್ ಚಿತ್ರ ಬಿಡುಗಡೆ ಆಗಿದ್ದ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now