ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕಾಂತಾರ ನೋಡಿ ಪಂಜುರ್ಲಿ ರೀಲ್ಸ್ ಮಾಡಿದ್ದ ಯುವತಿ: ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ತಪ್ಪು ಕಾಣಿಕೆ
ಧರ್ಮಸ್ಥಳಕ್ಕೆ ಬಂದು ತಪ್ಪು ಕಾಣಿಕೆ ಸಲ್ಲಿಸಿರುವ ಶ್ವೇತಾ ರೆಡ್ಡಿ ಸಮಸ್ತ ದೈವಾರಾಧಕರ ಬಳಿ ಕ್ಷಮೆ ಯಾಚಿಸಿದ್ದಾರೆ. ಅಲ್ಲದೆ ತಾನು ಬೆಂಗಳೂರಿನವಳಾಗಿದ್ದು ಇದರ ಬಗ್ಗೆ ಏನು ಗೊತ್ತಿಲ್ಲ. ಮುಂದೆಂದೂ ಈ ರೀತಿ ಮಾಡಲ್ಲ. ನಾನು ದೈವ, ಯಕ್ಷಗಾನ ಒಂದೇ ಎಂದು ತಿಳಿದು ಹೀಗೆ ಮಾಡಿದೆ ಎಂದಿದ್ದಾರೆ.
ಶ್ವೇತಾ ರೆಡ್ಡಿ ದೈವದ ವೇಷ ತೊಟ್ಟು ವರಾಹ ರೂಪಂ ಹಾಡಿಗೆ ರೀಲ್ಸ್ ಮಾಡಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಅಲ್ಲದೆ ಆಕೆಯ ವಿರುದ್ಧ ದೂರು ದಾಖಲಿಸುವಂತೆ ಒತ್ತಾಯಗಳು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಶ್ವೇತಾ ರೆಡ್ಡಿ ಧರ್ಮಸ್ಥಳಕ್ಕೆ ತಪ್ಪು ಕಾಣಿಸಿ ಒಪ್ಪಿಸಿ, ತೀರ್ಥ ಸ್ನಾನ ಮಾಡಿ ಕ್ಷಮೆ ಯಾಚಿಸಿದ್ದಾರೆ.
