ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಇಂದು ಬನಾರಸ್ ಸಿನಿಮಾ ರಿಲೀಸ್: ಸಾವಿರಕ್ಕೂ ಅಧಿಕ ಥಿಯೇಟರ್ ಗಳಲ್ಲಿ ಝೈದ್ ಖಾನ್ ಎಂಟ್ರಿ
ಸೇರಿದಂತೆ ಚಿತ್ರರಂಗದ ಸಾಕಷ್ಟು ಮಂದಿ ಭಾಗವಹಿಸಿದ್ದರು. ಝೈದ್ ಖಾನ್ ಗೆ ಜೋಡಿಯಾಗಿ ನಟಿ ಸೋಲ್ ಮೊಂತೇರೋ ಕಾಣಿಸಿಕೊಂಡಿದ್ದಾರೆ. ಬನಾರಸ್ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಏಕಕಾಲದಲ್ಲಿ ತಯಾರಾಗಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಬಿಡುಗಡೆ ಆಗುತ್ತಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಬನಾರಸ್ ಚಿತ್ರ ನವೆಂಬರ್ 4ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ.
ಕನ್ನಡದಲ್ಲಿ 180ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದ್ದರೆ, ಹಿಂದಿಯಲ್ಲಿ 500 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ತಮಿಳು ಮತ್ತು ತೆಲುಗಿನಲ್ಲಿ ತಲಾ 150 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆದರೆ, ಮಲಯಾಳಂನಲ್ಲೂ 50ಕ್ಕೂ ಅಧಿಕ ಚಿತ್ರಮಂದಿರಗಳು ಬನಾರಸ್ ತೆರೆ ಕಾಣಲಿದೆ.
ಝೈದ್ ಹಾಗೂ ಸೋನಲ್ ಜೊತೆ ಸುಜಯ್ ಶಾಸ್ತ್ರಿ, ದೇವರಾಜ್, ಅಚ್ಯುತ್ ಕುಮಾರ್, ಸಪ್ನಾ ರಾಜ್, ಬರ್ಖತ್ ಅಲಿ ಮುಂತಾದವರು ಕಾಣಿಸಿಕೊಂಡಿದ್ದಾರೆ. ಮೊದಲ ಚಿತ್ರದಲ್ಲೇ ಝೈದ್ ಖಾನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಲು ರೆಡಿಯಾಗಿದ್ದಾರೆ.
