• March 16, 2026

ಸಮಂತಾ ಅನಾರೋಗ್ಯದಿಂದ ಭಗ್ನವಾಯ್ತು ವಿಜಯ್ ದೇವರಕೊಂಡ ಕನಸು

ಟಾಲಿವುಡ್ ಸ್ಟಾರ್ ನಟಿ ಸಮಂತಾ ಮೈಯೋಸಿಟಿಸ್’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಸ್ವತಃ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಕಾಯಿಲೆಯ ಕುರಿತಾಗಿ ಹೇಳಿಕೊಂಡಿದ್ದರು. ಸಮಂತಾರ ಅನಾರೋಗ್ಯದಿಂದಾಗಿ ವಿಜಯ್ ದೇವರಕೊಂಡ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಸದ್ಯ ವಿಜಯ್ ದೇವರಕೊಂಡ ಹಾಗೂ ಸಮಂತಾ ಖುಷಿ ಚಿತ್ರದಲ್ಲಿ ತೊಡಿಗಿಕೊಂಡಿದ್ದಾರೆ. ಸುಮಾರ 60 ಫರ್ಸೆಂಟ್ ಶೂಟಿಂಗ್ ಕಂಪ್ಲೀಟ್ ಮಾಡಿರುವ ಖುಷಿ ತಂಡ ಇನ್ನೂ 40 ಫರ್ಸೆಂಟ್ ಶೂಟಿಂಗ್ ಭಾಕಿ ಉಳಿಸಿಕೊಂಡಿದೆ. ಈಗಾಗ್ಲೆ ಚಿತ್ರತಂಡ ಕಾಶ್ಮೀರಲ್ಲಿ ಒಂದು ಹಂತದ ಶೂಟಿಂಗ್ ಮುಗಿಸಿದೆ. ಇನ್ನೂ ಸಾಕಷ್ಟು ಶೂಟಿಂಗ್ ಭಾಕಿ ಇದ್ದು ಈ ಮಧ್ಯೆ ಸಮಂತಾ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಈಗಾಗಲೇ ಶೂಟಿಂಗ್ ಆರಂಭಗೊಳ್ಳಬೇಕಿತ್ತು. ಆದರೆ, ಸಮಂತಾಗೆ ಅನಾರೋಗ್ಯ ಕಾಣಿಸಿಕೊಂಡಿರುವುದರಿಂದ ಚಿತ್ರೀಕರಣ ಮುಂದೂಡುವುದು ಅನಿವಾರ್ಯವಾಗಿದೆ. ಸಮಂತಾ ಅವರಿಗೆ ಸ್ನಾಯು ಸೆಳೆತ ಹಾಗೂ ಚರ್ಮದ ಅಲರ್ಜಿ ಇರುವ ಕಾರಣಕ್ಕೆ ಟ್ರೀಟ್ ಮಂಟ್ ಗಾಗಿ ಅಮೆರಿಕಕ್ಕೆ ತೆರಳಿದ್ದರು.ಹೀಗಾಗಿ ಸಮಂತಾ ಅವರಿಗೆ ಸಾಕಷ್ಟು ವಿಶ್ರಾಂತಿಯ ಅಗತ್ಯವಿದೆ. ಇತ್ತೀಚೆಗೆ ಡ್ರಿಪ್ ಹಾಕಿಕೊಂಡೇ ಸಮಂತಾ  ‘ಯಶೋದ’ ಚಿತ್ರಕ್ಕೆ ಡಬ್ಬಿಂಗ್ ಮಾಡಿದ್ದರು. ಹೀಗಾಗಿ ಸದ್ಯಕ್ಕಂತೂ ಅವರ ‘ಖುಷಿ’ ಚಿತ್ರದ ಕೆಲಸ ಪೂರ್ಣಗೊಳ್ಳಲ್ಲ ಎನ್ನಲಾಗುತ್ತಿದೆ. ಹೀಗಾಗಿ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಮುಂದೂಡಿದೆ. ಸಿನಿಮಾ ರಿಲೀಸ್ ಡೇಟ್ ಮುಂದೂಡಲ್ಪಟ್ಟ ಬಗ್ಗೆ ವಿಜಯ್ ದೇವರಕೊಂಡ ಮಾಹಿತಿ ನೀಡಿದ್ದಾರೆ. ‘ನಾವು ಶೇ.60 ಶೂಟಿಂಗ್ ಪೂರ್ಣಗೊಳಿಸಿದ್ದೀವಿ. ಆರಂಭದಲ್ಲಿ ಚಿತ್ರವನ್ನು ಡಿಸೆಂಬರ್​​ನಲ್ಲೇ ರಿಲೀಸ್ ಮಾಡುವ ಪ್ಲ್ಯಾನ್ ಇತ್ತು. ಆದರೆ, ಹಲವು ಕಾರಣದಿಂದ ಚಿತ್ರ ಫೆಬ್ರವರಿಗೆ ಮುಂದೂಡಲ್ಪಟ್ಟಿದೆ’ ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now