• March 14, 2026

ಕಾಂತಾರ’ ಚಿತ್ರವನ್ನು ಉಲ್ಲೇಖಿಸಿದ ಕೇಂದ್ರ ಸಚಿವ ಪೀಯೂಷ್ ಗೋಯಲ್

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈಗಾಗ್ಲೆ ಸ್ಟಾರ್ ನಟ, ನಟಿಯರು ಸೇರಿದಂತೆ ಸಾಕಷ್ಟು ಮಂದಿ ಚಿತ್ರ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಇದೀಗ ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕ ಸಚಿವ ಪೀಯೂಷ್ ಗೋಯಲ್ ಕೂಡ ಕಾಂತಾರದ ಬಗ್ಗೆ ಮಾತನಾಡಿದ್ದಾರೆ.  ಬೆಂಗಳೂರಿನಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ ಸಮ್ಮೇಳನದಲ್ಲಿ ಪೀಯೂಷ್ ಗೋಯಲ್ ‘ಕಾಂತಾರ’ ಚಿತ್ರವನ್ನು ಉದಾಹರಣೆ ನೀಡಿ ಮಾತನಾಡಿದ್ದಾರೆ. ‘ಕರ್ನಾಟಕ ಹೂಡಿಕೆ ಮಾಡಲು ಒಳ್ಳೆಯ ತಾಣ. ಅದರಲ್ಲೂ ಭವಿಷ್ಯದ ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡಲು ಸಾಕಷ್ಟು ಅವಕಾಶ ಇದೆ. ಅವರ ಹೂಡಿಕೆ ಆಲೋಚನೆಗಳು ಯಾವ ರೀತಿ ಇದೆ ಎಂದರೆ, ಕರ್ನಾಟಕದ ಸಂಸ್ಕೃತಿಯನ್ನು ಹೇಳುವ ‘ಕಾಂತಾರ’ ಸಿನಿಮಾದ ರೀತಿಯೇ. ಕಡಿಮೆ ಬಜೆಟ್​ನಲ್ಲಿ ತಯಾರಾದ ಈ ಸಿನಿಮಾ 20 ಪಟ್ಟು ಹೆಚ್ಚು ಗಳಿಕೆ ಮಾಡಿದೆ. ಹೂಡಿಕೆದಾರರು ಈ ನಿಟ್ಟಿನಲ್ಲಿಯೂ ಚಿಂತನೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ದೇಶ ಹಾಗೂ ಕರ್ನಾಟಕದಲ್ಲಿ ಹೂಡಿಕೆಗೆ ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದಾರೆ’ ಎಂದು ಪೀಯೂಷ್ ಗೋಯಲ್ ಹೇಳಿದ್ದಾರೆ. ಹೂಡಿಕೆದಾರರ ಜೊತೆ ಮಾತನಾಡಿದ ಸಚಿವರು, ‘ಸ್ಥಳೀಯ ಸಂಸ್ಕೃತಿ, ಆಚರಣೆಯ ಕಥಾಹಂದರ ಇರುವ ಚಿತ್ರ ಈ ಚಿತ್ರದ ತಯಾರಿಕೆಗೆ ಸಣ್ಣ ಬಂಡವಾಳವನ್ನೇ ಹೂಡಲಾಗಿದೆ. ಆದರೆ, ಈಗ ಆ ಚಿತ್ರ 300 ಕೋಟಿಗೂ ಹೆಚ್ಚು ಗಳಿಸಿದೆ. ಕಾಂತಾರ ಚಿತ್ರವನ್ನು ನಾನೂ ವೀಕ್ಷಿಸಿದ್ದೇನೆ. ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸ್ಥಳಿಯ ಕಥೆಯನ್ನೇ ಜಾಗತಿಕ ಮಟ್ಟದಲ್ಲಿ ಹೇಳುವಂತೆ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ’ ಎಂದು ಚಿತ್ರದ ಕುರಿತು ಮೆಚ್ಚುಗೆ ಸೂಚಿಸಿದರು. ಕಳೆದ ಸೆಪ್ಟೆಂಬರ್ 30ರಂದು ತೆರೆಕಂಡ ಕಾಂತಾರ ಚಿತ್ರ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ. ಎಲ್ಲಾ ಸಿನಿಮಾಗಳ ದಾಖಲೆಯನ್ನು ಹಿಂದಿಕ್ಕುತ್ತಿರುವ ಕಾಂತಾರ ಚಿತ್ರ ಮುನ್ನೂರು ಕೋಟಿ ಅಧಿಕ ಕಲೆಕ್ಷನ್ ಮಾಡುತ್ತಿದೆ. ಚಿತ್ರ ತೆರೆಕಂಡು ಒಂದು ತಿಂಗಳು ಕಳೆದಿದ್ರು ಸಾಕಷ್ಟ ಕಡೆಗಳಲ್ಲಿ ಇನ್ನೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now