• March 16, 2026

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಪಟ್ಟಕ್ಕೆ ವಾರ್: ಮನೆಯಿಂದ ಹೊರ ಹೋಗಲು ಮುಂದಾದ ರೂಪೇಶ್ ರಾಜಣ್ಣ

ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಆಟದ ಬಿರುಸು ಹೆಚ್ಚಾಗುತ್ತಿದೆ. ಈಗಾಗ್ಲೆ ನಾಲ್ಕೈದು ಜನ ಮನೆಯಿಂದ ಹೊರ ಹೋಗಿದ್ದು ಉಳಿದ ಸ್ಪರ್ಧಿಗಳು ಭಾರಿ ಪೈಪೋಟಿಗೆ ಬಿದ್ದು ಆಟವಾಡುತ್ತಿದ್ದಾರೆ. ಇದೀಗ ಕ್ಯಾಪ್ಟೆನ್ಸಿ ಟಾಸ್ಕ್ ವಿಚಾರಕ್ಕೆ ಅನುಪಮಾ ಗೌಡ ಹಾಗೂ ರೂಪೇಶ್ ರಾಜಣ್ಣ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ರೂಪೇಶ್ ರಾಜಣ್ಣ ಮನೆಯಿಂದ ಹೊರ ಹೋಗಲು ಮುಂದಾಗಿದ್ದಾರೆ. ಆರಂಭದಲ್ಲಿ ಚೇನ್ನಾಗಿಯೇ ಇದ್ದ ಮನೆ ಮಂದಿಯ ಮಧ್ಯೆ ಇದೀಗ ಮನಸ್ತಾಪ ಶುರುವಾಗಿದೆ. ದೊಡ್ಮನೆ ದಿನದಿಂದ ದಿನಕ್ಕೆ ಸಾಕಷ್ಟು ರೋಚಕ ತಿರುವು ಪಡೆದುಕೊಂಡು ಮುನ್ನಗ್ಗುತ್ತಿದೆ. ಕ್ಯಾಪ್ಟೆನ್ಸಿ ಪಟ್ಟ ಏರಲು ಬಿಗ್ ಬಾಸ್ ನೀಡಿದ್ದ ಟಾಸ್ಕ್‌ನಿಂದ ಮನೆಯಲ್ಲಿ ಜಗಳ ಶುರುವಾಗಿದೆ. ಟಾಸ್ಕ್‌ವೊಂದರಲ್ಲಿ ಮೊದಲು ಬಝರ್ ಒತ್ತಿದ್ದು ನಾನು ಎಂದು ರೂಪೇಶ್ ರಾಜಣ್ಣ ಪಟ್ಟು ಹಿಡಿದಿದ್ದಾರೆ. ಬಿಗ್ ಬಾಸ್ ಬಳಿ ಅನುಪಮಾ ಅಪೀಲ್ ಮಾಡಲಿಲ್ಲ ಎಂಬ ಕಾರಣಕ್ಕೆ ರೂಪೇಶ್ ರಾಜಣ್ಣ ಗರಂ ಆಗಿದ್ದಾರೆ. ಇದೇ ಕಾರಣಕ್ಕೆ ಸೂಟ್ ಕೇಸ್‌ ಹಿಡಿದು ಮನೆಯಿಂದ ಹೊರಗೆ ಹೋಗಲು ರೂಪೇಶ್ ರಾಜಣ್ಣ ಮುಂದಾಗಿದ್ದಾರೆ. ಕೊನೆಗೆ ನನ್ನ ತಪ್ಪಿದ್ದರೆ ನಾನೇ ನಿಮ್ಮ ಕಾಲಿಗೆ ಬಿದ್ದು ಕ್ಷಮೆ ಕೇಳ್ತೀನಿ ಎಂದು ರಾಜಣ್ಣ ಅವರಿಗೆ ಅನುಪಮಾ ಕೇಳಿಕೊಂಡಿದ್ದಾರೆ. ಮುಂದಿನ ವಾರದ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಲು ನಡೆದ ಜಟಾಪಟಿಯಲ್ಲಿ ರೂಪೇಶ್ ರಾಜಣ್ಣ ಹಾಗೂ ಪ್ರಶಾಂತ್ ಸಂಬರ್ಗಿ ಒಂದೇ ಸಮಯದಲ್ಲಿ ಬಝರ್ ಒತ್ತಿದರು. ಸಂಬರ್ಗಿ ಮೊದಲು ಬಝರ್ ಒತ್ತಿದರು ಅಂತ ಅನುಪಮಾ ಹೇಳಿದ್ದರು. ಆಗ ನಾನು ಮೊದಲು ಒತ್ತಿದ್ದು ಅನ್ನೋದು ರೂಪೇಶ್ ರಾಜಣ್ಣ ಅವರ ವಾದವಾಗಿತ್ತು. 100% ನಾನು ಮುಟ್ಟಿದ್ಮೇಲೆ ಪ್ರಶಾಂತ್ ಸಂಬರ್ಗಿ ಮುಟ್ಟಿದ್ದು. ದೇವರಿದ್ದಾನೆ ಎಂದು ರಾಜಣ್ಣ ಹೇಳಿದರು. ಇದರಿಂದ ಕೋಪಗೊಂಡ ಅನುಪಮಾ, ಆ ಲೈನ್ ಹೇಳಬೇಡಿ. ನಾನಿಲ್ಲಿ ಯಾರಿಗೂ ಫೇವರ್ ಮಾಡ್ತಿಲ್ಲ ಎಂದು ಗರಂ ಆದರು. ನಾನು ಬಿಗ್ ಬಾಸ್ ಮನೆಯ ರಸ್ತೆ ಮೇಲೆ ಮಲಗುತ್ತೇನೆ. ನ್ಯಾಯಕ್ಕಾಗಿ ಹೋರಾಡುತ್ತೇನೆ. ಗೊಂದಲ ಇದ್ದರೆ ಕೇಳಿಕೊಳ್ಳಿ ಅಂತ ಮೊದಲೇ ಹೇಳಿದ್ದೆ. ಆದರೆ, ಕೇಳದೆ ನೇರವಾಗಿ ಘೋಷಣೆ ಮಾಡಿದರು ಎಂದು ಕ್ಯಾಮರಾ ಮುಂದೆ ರಾಜಣ್ಣ ಹೋರಾಟಕ್ಕಿಳಿದರು. ಆಟ ಆಡುವುದಿಲ್ಲ ಎಂದು ರೂಪೇಶ್ ರಾಜಣ್ಣ ಪಟ್ಟು ಹಿಡಿದರು.  ಈ ವೇಳೆ, ನಾನು ತಪ್ಪು ಮಾಡಿದ್ರೆ ಬಿಗ್ ಬಾಸ್ ಶಿಕ್ಷೆ ಕೊಡಲಿ. ಬೇಕಿದ್ದರೆ, ನಾನೇ ಹೊರಗೆ ಹೋಗುತ್ತೇನೆ ಎಂದರು ಅನುಪಮಾ. ಆದರೂ ರಾಜಣ್ಣ ಅವರ ಮನವೊಲಿಸಲು ಅನುಪಮಾ ಕಡೆಗೂ ಸೋತು ನನ್ನ ತಪ್ಪಿದ್ದರೆ ನಾನೇ ನಿಮ್ಮ ಕಾಲಿಗೆ ಬಿದ್ದು ಕ್ಷಮೆ ಕೇಳ್ತೀನಿ ಎಂದು ರಾಜಣ್ಣ ಅವರಿಗೆ ಅನುಪಮಾ ಕೇಳಿಕೊಂಡರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now