ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ: ಕಾರ್ಯಕ್ರಮದ ಅವ್ಯವಸ್ಥೆ ಕುರಿತು ವ್ಯಂಗ್ಯವಾಡಿದ ಡಿಕೆಶಿ
‘ವೆರಿ ಸಾರಿ ಫಾರ್ ಸ್ಟೇಜ್ ಆರ್ಗನೈಸೆಷನ್. ನಿನ್ನೆ ಆದ ಅವ್ಯವಸ್ಥೆ ಬಗ್ಗೆ ನೀವೇ ವಿಶ್ಲೇಷಣೆ ಮಾಡಿ, ಬಳಿಕ ನಾವು ಮಾತಾಡ್ತೇವೆ’ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ರಾಜಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ ಕಾಲದಲ್ಲಿ ನಾನೂ ಇದ್ದೆ. ಎಂತಹ ಕಾರ್ಯಕ್ರಮ ಅದು ಎಂದು ಡಾ.ರಾಜ್ ಕುಮಾರ್ ಅವರಿಗೆ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ್ದನ್ನು ಡಿ.ಕೆ. ಶಿವಕುಮಾರ್ ನೆನಪಿಸಿಕೊಂಡರು.
ಪುನೀತ್ ರಾಜ್ ಕುಮಾರ್ ಅವರ ಸಿನಿ ಸೇವೆ ಹಾಗೂ ಸಮಾಜ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿತು. ವಿಧಾನ ಸೌಧದ ಮುಂದೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸೂಪರ್ ಸ್ಟಾರ್ ರಜನಿಕಾಂತ್, ಜೂನಿಯರ್ ಎನ್ ಟಿ ಆರ್ , ಸುಧಾಮೂರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
