ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಶಿವರಾಜ್ ಕುಮಾರ್ ನಟನೆಯ ವೇದ ಚಿತ್ರದ ಯಂಗ್ ಲುಕ್ ರಿವೀಲ್
ವೇದ ಶಿವರಾಜ್ ಕುಮಾರ್ ನಟನೆಯ 125ನೇ ಚಿತ್ರವಾಗಿದ್ದು ಹೋಮ್ ಬ್ಯಾನರ್ ‘ಗೀತಾ ಪಿಕ್ಚರ್ಸ್’ನಲ್ಲಿ ತಯಾರಾಗುತ್ತಿರುವ ಮೊಟ್ಟ ಮೊದಲ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ಶಿವಣ್ಣ ಪತ್ನಿ ಗೀತಾ ಶಿವರಾಜ್ ಕುಮಾರ್ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದದಾರೆ.
ವೇದ ಸಿನಿಮಾ 1960ರ ಕಥೆಯನ್ನೇ ಆಧರಿಸಿದೆ. ಸ್ವತಂತ್ರ ನಂತರದ ಕಾಲಘಟದ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಪಾತ್ರ ಪೋಷಣೆ ಭಿನ್ನ-ವಿಭಿನ್ನವಾಗಿಯೇ ಇರಲಿದ್ದು, ಪ್ರತಿ ಲುಕ್ ನಲ್ಲೂ ಶಿವರಾಜ್ ಕುಮಾರ್ ಸಖತ್ ಆಗಿಯೇ ಕಾಣಿಸಿಕೊಂಡಿದ್ದಾರೆ.
ಇದೇ ವರ್ಷ ಡಿಸೆಂಬರ್-23 ಕ್ಕೆ ವೇದ ಸಿನಿಮಾ ರಿಲೀಸ್ ಆಗುತ್ತಿದೆ. ಕ್ರಿಸ್ಮಸ್ ಹಬ್ಬಕ್ಕೂ ಮುನ್ನವೇ ಕನ್ನಡದ ವೇದ ತೆರೆಗೆ ಬರುತ್ತದೆ. ಕನ್ನಡದ ವೇದ ಚಿತ್ರ ವಿಶೇಷವಾಗಿಯೇ ಇದೆ. ಇತ್ತೀಚಿಗೆ ಬಿಟ್ಟಿರೋ ಪೋಸ್ಟರ್ ನಲ್ಲಿ ಪ್ರಮುಖ ಮಹಿಳಾ ಪಾತ್ರಗಳು ರಿವೀಲ್ ಆಗಿದ್ದವು. ಆ ದಿನದಿಂದಲೇ ಸಿನಿಮಾ ಮಹಿಳಾ ಪ್ರಧಾನ ಚಿತ್ರವೇ ಅನ್ನೋ ಪ್ರಶ್ನೆನೂ ಹುಟ್ಟಿಕೊಂಡಿದೆ.
