• June 19, 2026

ಮೆಕ್ಕಾಗೆ ಹೊರಟ್ರಾ ಇಳಯರಾಜ ಪುತ್ರ ಯುವನ್ ಶಂಕರ್?

ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ, ಇಳಯರಾಜ ಅವರ ಪುತ್ರ ಯುವನ್ ಶಂಕರ್ ರಾಜರ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಶಂಕರ್ ರಾಜ ಮೆಕ್ಕಾ ಯಾತ್ರೆಗೆ ತೆರಳಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು ಇದಕ್ಕೆ ಪುಷ್ಠಿ ನೀಡುವಂತೆ ಫೋಟೋವೊಂದು ಸಾಮಾಜಿಕ ಜಾಲಾ ತಾಣದಲ್ಲಿ ಹರಿದಾಡುತ್ತಿದೆ. ಯುವನ್ ಶಂಕರ್ ರಾಜ್ ಯಾತ್ರಿಕರ ಉಡುಪಿನಲ್ಲಿ ವಿಮಾದಲ್ಲಿ ಕಾಣಿಸಿಕೊಂಡಿದ್ದು ಮೆಕ್ಕಾ ಯಾತ್ರೆಗೆ ಹೊರಟ್ಟಿದ್ದಾರೆ ಎನ್ನಲಾಗುತ್ತಿದೆ.  ಆದರೆ ಈ ಬಗ್ಗೆ ಯುವನ್ ಅವರ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. 2014ರಲ್ಲಿ ಶಂಕರ್ ಯುವನ್ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿರುವುದುದಾಗಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಮೈಕ್ರೋ ಬ್ಲಾಗಿಂಗ್ ಟ್ವಿಟರ್ ನಲ್ಲಿ ನಾನು ಇಸ್ಲಾಂ ಧರ್ಮದ ಹಿಂಬಾಲಕನಾಗಿದ್ದು, ಅದಕ್ಕಾಗಿ ನನಗೆ ಹೆಮ್ಮೆಯಿದೆ ಎಂದು ಯುವನ್ ಬರೆದು ಕೊಂಡಿದ್ದರು. ಈ ವಿಚಾರದಲ್ಲಿ ನನ್ನ ಮತ್ತು ನನ್ನ ತಂದೆಯ ನಡುವೆ ಭಿನ್ನಾಬಿಪ್ರಾಯವಿಲ್ಲ ಎಂದು ಕೂಡ ಯುವನ್ ಶಂಕರ್ ರಾಜ್ ಹೇಳಿದ್ದರು. ಯುವನ್ ಶಂಕರ್ ಇಸ್ಲಾಂ ಧರ್ಮದ ಮತಾಂತರಗೊಳ್ಳುವ ಮುನ್ನ ಇಸ್ಲಾ ಧರ್ಮದ ಪದ್ದತಿಯ ಬಗ್ಗೆ ಒಂದು ವರ್ಷ ತರಬೇತಿ ಪಡೆದಿದ್ದರು. ದಿನವೊಂದಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದಾರೆ. ತನ್ನ ಬ್ಯೂಸಿ ಕೆಲಸದ ಒತ್ತಡದ ನಡುವೆಯೂ ನಮಾಜ್ ಮಾತ್ರ ಯುವನ್ ತಪ್ಪಿಸುತ್ತಿರಲಿಲ್ಲವಂತೆ. ಯುವನ್ ಶಂಕರ್ ರಾಜ ಇದುವರೆಗೆ ನೂರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಪ್ರಮುಖವಾಗಿ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಯುವನ್ ಅವರಿಗೆ ಬಹುದೊಡ್ಡ ಹೆಸರು ಇದೆ. 1996ಲ್ಲಿ ತಮಿಳು ಚಿತ್ರ ಅರವಿಂದನ್ ಮೂಲಕ್ಕೆ ಸಂಗೀತ ನಿರ್ದೇಶನ ಮಾಡುವ ಮೂಲಕ ಯುವನ್ ಶಂಕರ್ ರಾಜ ಸಿನಿ ಜರ್ನಿ ಆರಂಭಿಸಿದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now