• June 19, 2026

ಅಪ್ಪುಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ: ಭಾವುಕರಾಗಿ ಪ್ರಶಸ್ತಿ ಸ್ವೀಕರಿಸಿದ ಪುನೀತ್ ಪತ್ನಿ ಅಶ್ವಿನಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಸಿನಿಮಾ ರಂಗ ಮತ್ತು ಸಮಾಜ ಸೇವೆಯನ್ನು ಪರಿಗಣಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿದರು. ಪುನೀತ್ ಪರವಾಗಿ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಈ ಪ್ರಶಸ್ತಿಯನ್ನು ಸ್ವೀಕರಿಸಿ ಭಾವುಕರಾದರು.  ಪ್ರಶಸ್ತಿ ಸ್ವೀಕರಿಸಿದ ಪತ್ನಿ ಅಶ್ವಿನಿ ಭಾವುಕರಾಗಿಯೇ ಎಲ್ಲರಿಗೂ ಧನ್ಯವಾದ ತಿಳಿಸಿದರು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಇಲ್ಲಿಯೇ ಹುಟ್ಟಿಬನ್ನಿ ಪುನೀತ್ ಎಂದು ಹೇಳಿದರು. ಪುನೀತ್ ಬಗ್ಗೆ ಮಾತನಾಡಿದ ರಜನಿಕಾಂತ್ ಚೆನ್ನೈನಲ್ಲಿ ಮೊದಲ ಭಾರಿಗೆ ಪುನೀತ್ ಅವರನ್ನು ನೋಡಿದೆ. ಶಬರಿಮಲೆಗೆ 1977ರಲ್ಲಿ ಡಾ.ರಾಜ್ ಕುಮಾರ್ ಜೊತೆ ಪುನೀತ್ ಶಬರಿ ಮಲೆಗೆ ಹೋಗಿದ್ದರು. ಅಂದು ರಾಜ್ ಕುಮಾರ್ ಕಾಲ ಮೇಲೆ ಕುಳಿತುಕೊಂಡಿದ್ದ ಮಗುವನ್ನು ನೋಡಿ ಸಾಕಷ್ಟು ಖುಷಿಯಾಯಿತು. ಅಂದು ನೋಡಿದ ಮಗುವೇ ಪುನೀತ್ ಎಂದು ರಜನಿಕಾಂತ್ ಹೇಳಿದರು. ಅಪ್ಪು ಮರೆಯಾದಾಗ ನಾನು ಅಪರೇಷನ್ ಆಗಿ ಆಸ್ಪತ್ರೆಯಲ್ಲಿದ್ದೆ. ಅಂದು ನಾನು ಬಂದಿದ್ದರು ಅಪ್ಪು ಅವರನ್ನು ನೋಡಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಪುನೀತ್ ಅವರ 4 ವರ್ಷದ ಹುಡುಗನಿದ್ದಗ ಇದ್ದ ಮುಖಕ ಇನ್ನೂ ನನ್ನ ಮನದಲ್ಲಿ ಹಾಗೆ ಇದೆ. ಅದು ಹಾಗೆ ಇರಲಿ ಎಂದು ರಜನಿಕಾಂತ್ ಹೇಳಿದರು. ಪುನೀತ್ ಅವರು ಸತ್ತಾಗ ಅವರು ಸ್ಟಾರ್ ಎಂದಾಗಲಿ ಅಥವಾ ಡಾ.ರಾಜ್ ಕುಮಾರ್ ಮಗ ಎಂದಾಗಲಿ ಅಷ್ಟು ಜನ ಬರಲಿಲ್ಲ. ಪುನೀತ್ ಅವರ ಸಾಧನೆಯನ್ನು ನೋಡಿ ಅಷ್ಟು ಜನ ಅಂದು ಸೇರಿದ್ದರು ಎಂದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now