• February 10, 2026

ಕಾಂತಾರ ಚಿತ್ರ ಹಾಸ್ಯಾಸ್ಪದವಾಗಿದೆ ಎಂದ ನಿರ್ದೇಶಕ ಅಭಿರೂಪ್ ಬಸು: ಕೊಳಕು ಮನಸ್ಥಿತಿಯಿಂದ ಆಚೆ ಬನ್ನಿ ಎಂದ ನೆಟ್ಟಿಗರು

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಚಿತ್ರವನ್ನು ಇಡೀ ಜಗತ್ತೇ ಹಾಡಿ ಹೊಗಳುತ್ತಿದೆ. ಚಿತ್ರ ನೋಡಿದ ಸೂಪರ್ ಸ್ಟಾರ್ ರಜನಿಕಾಂತ್ ರಿಷಬ್ ರನ್ನು ಮನೆಗೆ ಕರೆಸಿ ಸನ್ಮಾನಿಸಿದ್ದಾರೆ. ಇಡೀ ದೇಶವೇ ಕೊಂಡಾಡುತ್ತಿರುವ ಕಾಂತಾರ ಚಿತ್ರವನ್ನು ಬಂಗಾಲಿ ಚಿತ್ರ ನಿರ್ದೇಶಕ ಅಭಿರೂಪ್ ಬಸು ಟೀಕೆ ಮಾಡಿದ್ದಾರೆ. ಕಾಂತಾರ ಹಾಸ್ಯಾಸ್ಪದ ಸಿನಿಮಾವಾಗಿದ್ದು, ಅತ್ಯಂತ ಕಳಪೆ ರೀತಿಯ ಕಥೆಯನ್ನು ಹೊಂದಿದೆ. ಅಲ್ಲದೇ ಅಪ್ರಮಾಣಿಕವಾಗಿ ಕಥೆಯನ್ನು ಹೆಣೆಯಲಾಗಿದೆ ಎಂದೂ ಅಭಿರೂಪ್ ಬಸು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಜಗತ್ತಿನ ಜನರು ಬುದ್ದಿವಂತರು. ಅವರ ಬುದ್ದಿವಂತಿಕೆಯನ್ನೇ ಈ ಸಿನಿಮಾ ಅನುಮಾನಿಸುತ್ತದೆ ಮತ್ತು ಅಣಕಿಸುತ್ತದೆ ಎಂದಿರುವ ಅಭಿರೂಪ್ ಬಸು, ಕಥೆಯಲ್ಲಿ ಪ್ರಾಮಾಣಿಕತೆಗಿಂತ ಗಿಮಿಕ್ ಗೆ ಹೆಚ್ಚು ಒತ್ತು ನೀಡಲಾಗಿದೆ. ಅದರಲ್ಲೂ ಎಲ್ಲರೂ ಸಿನಿಮಾದ ಕ್ಲೈಮ್ಯಾಕ್ಸ್ ಬಗ್ಗೆ ಮಾತನಾಡುತ್ತಾರೆ. ನನಗೆ ಕ್ಲೈಮ್ಯಾಕ್ಸ್ ಬಗ್ಗೆ ಕುತೂಹಲ ಅಥವಾ ಆಸಕ್ತಿ ಉಳಿಯಲೇ ಇಲ್ಲವೆಂದು ಅವರು ಬರೆದುಕೊಂಡಿದ್ದಾರೆ. ಅಭಿರೂಪ್ ಬಸು ಅವರ ಪೋಸ್ಟ್ ಗೆ ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದು ನಿಮ್ಮ ಕೊಳಕು ಮನಸ್ಸಿನಿಂದ ಆಚೆ ಬನ್ನಿ. ಪ್ರತಿಭಾವಂತ ನಟ, ನಿರ್ದೇಶಕರು, ಕಲಾವಿದರುಗಳೇ ಚಿತ್ರದ ಬಗ್ಗೆ ಮೆಚ್ಚಿ ಮಾತನಾಡುತ್ತಿರುವಾಗ ನಿಮ್ಮ ಪ್ರತಿಕ್ರಿಯೆ ಸರಿಯಾದುದ್ದಲ್ಲ. ಕಾಂತಾರದ ಗೆಲುವನ್ನು ನಿಮ್ಮಿಂದ ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲವೆಂದು ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಕಾಂತಾರ ಚಿತ್ರ ನೋಡಿ ಸೂಪರ್ ಸ್ಟಾರ್ ರಜನಿಕಾಂತ್ ರಿಷಬ್ ಶೆಟ್ಟಿಯನ್ನು ಕರೆದು ಸನ್ಮಾನಿಸಿದ್ದಾರೆ. ಅಲ್ಲದೆ ಕಂಗಾನ ರಣಾವತ್, ಪೂಜಾ ಹೆಗ್ಡೆ, ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ, ಪ್ರಭಾಸ್ ಸೇರಿದಂತೆ ಸಾಕಷ್ಟು ಮಂದಿ ಚಿತ್ರ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now