ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮತ್ತೆ ಸುದ್ದು ಮಾಡ್ತಿದ್ದಾರೆ ಪವಿತ್ರಾ ಲೋಕೇಶ್, ನರೇಶ್: ರೊಮ್ಯಾಂಟಿಕ್ ವಿಡಿಯೋ ಮಾಡಿದ ಜೋಡಿಗಳು
ನಿನ್ನೆಯಷ್ಟೇ ನರೇಶ್ ಹಾಗೂ ಪವಿತ್ರಾ ಒಟ್ಟಿಗೆ ವಿಡಿಯೋ ಮಾಡಿದ್ದಾರೆ. ಪವಿತ್ರಾ ಲೋಕೇಶ್ ಭುಜದ ಮೇಲೆ ಕೈ ಇಟ್ಟು ಸಖತ್ ರೊಮ್ಯಾಂಟಿಕ್ ಆಗಿ ನರೇಶ್ ಮಾತನಾಡಿದ್ದಾರೆ. ತಾವಿಬ್ಬರೂ ಗಂಡ ಹೆಂಡತಿಯಾಗಿ ನಟಿಸಿರುವ ಕುರಿತು ಮತ್ತು ಆ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಬಂದಿರುವ ಕುರಿತು ನರೇಶ್ ಹಾಗೂ ಪವಿತ್ರಾ ಲೋಕೇಶ್ ವಿಡಿಯೋದಲ್ಲಿ ಮಾತನಾಡಿದ್ದಾರೆ.
ಖ್ಯಾತ ತೆಲುಗು ನಟ ಅಲಿ ಆಲಿ ನಿರ್ಮಿಸಿ, ನಟಿಸಿರುವ ‘ಅಂದರೂ ಬಾಗುಂಡಾಲಿ ಅಂದುಲೋ ನೇನುಂಡಾಲಿ’ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಿದ್ದು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪವಿತ್ರಾ ಲೋಕೇಶ್ ಪಾತ್ರವನ್ನು ಮೆಚ್ಚಿ ಸಾಷಕ್ಟು ಮಂದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು ಪವಿತ್ರಾ ನಟನೆಗೆ ಫುಲ್ ಮಾಕ್ಸ್ ಸಿಗುತ್ತಿದ್ದಂತೆ ಪವಿತ್ರಾ ಹಾಗೂ ನರೇಶ್ ವಿಡಿಯೋ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
