ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮನೆಯಲ್ಲಿ ಅಪ್ಪು ಫೋಟೋ ಇಟ್ಟು ವಿಶೇಷ ಗೌರವ ಸೂಚಿಸಿದ ಜೂನಿಯರ್ NTR
ಜೂನಿಯರ್ ಎನ್ ಟಿ ಆರ್ ಹಾಗೂ ಪುನೀತ್ ರಾಜ್ ಕುಮಾರ್ ಸಾಕಷ್ಟು ವರ್ಷದಿಂದ ಉತ್ತಮ ಸ್ನೇಹಿತರು. ಜೂನಿಯರ್ ಎನ್ ಟಿ ಆರ್ ಮನದಲ್ಲಿ ಮಾತ್ರವಲ್ಲ ತಮ್ಮ ಮನೆಯಲ್ಲಿಯೂ ಪುನೀತ್ ರಾಜ್‌ಕುಮಾರ್ ಅವರ ಫೋಟೋವನ್ನು ಇಟ್ಟುಕೊಳ್ಳುವ ಮೂಲಕ ಗೌರವ ಸೂಚಿಸಿದ್ದಾರೆ. ಸದ್ಯ ಈ ಫೋಟೋ ಸಹಿತ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಜೂ.ಎನ್ ಟಿ ಆರ್ ಅವರದ್ದು ಸಿನಿಮಾ ಕುಟುಂಬ. ಅವರ ತಾತ ನಂದಮೂರಿ ತಾರಕ ರಾಮ ರಾವ್ ಅವರು ಸೂಪರ್ ಸ್ಟಾರ್ ಆಗಿದ್ದರು. ತಾತನ ಫೋಟೋವನ್ನು ಮನೆಯಲ್ಲಿ ಇಟ್ಟುಕೊಂಡಿರುವ ಜೂ.ಎನ್ಟಿಆರ್, ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರವನ್ನು ಇಟ್ಟಿದ್ದಾರೆ. ಜೂ.ಎನ್ ಟಿ ಆರ್‌ಗೆ ಅಪ್ಪು ಮೇಲಿನ ಪ್ರೀತಿಗೆ ಅಪ್ಪು ಅಭಿಮಾನಿಗಳು ಮನಸೋತಿದ್ದಾರೆ.
ನವೆಂಬರ್ 1ರಂದು ಪುನೀತ್ ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಈ ಸಮಾರಂಭ ನಡೆಯಲಿದೆ ಸಮಾರಂಭಕ್ಕೆ ಜೂ ಎನ್ ಟಿ ಆರ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಅವರು ವಿಶೇಷ ಅತಿಥಿಯಾಗಿ ಆಗಮಿಸುತ್ತಿದ್ದಾರೆ.
