ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಬೆಂಗಳೂರಿನಿಂದ ಮೈಸೂರಿನವರೆಗೆ ಝೈದ್ ಸಾರಥ್ಯದಲ್ಲಿ ‘ಬನಾರಸ್’ ಯಾತ್ರೆ!
ಆ ಬಳಿಕ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನಕ್ಕೂ ಝೈದ್ ದರ್ಶನ ಪಡೆದುಕೊಂಡರು. ನಂತರ ಬನಾರಸ್ ಯಾತ್ರೆ ಚೆನ್ನಪಟ್ಟಣಕ್ಕೆ ತೆರಳಿತ್ತು. ಅಲ್ಲಿ ಅದ್ದೂರಿಯಾಗಿ ರೋಡ್ ಶೋ ನೆರವೇರಿತು. ಝೈದ್ ಅಲ್ಲಿಯೂ ದೇವಸ್ಥಾನ ಮತ್ತು ದರ್ಗಾಗಳಿಗೆ ಭೇಟಿ ನೀಡಿದರು. ಅಲ್ಲೇ ಒಂದು ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಹೊಸಾ ಕಚೇರಿಯೊಂದರ ಆರಂಭ ಸಮಾರಂಭದಲ್ಲಿ ಭಾಗಿಯಾದರು. ಚನ್ನಪಟ್ಟಣದಲ್ಲಿಯೇ ಮಧ್ಯಾಹ್ನದ ಊಟ ಮುಗಿಸಿಕೊಂಡು ಮತ್ತೆ ಬನಾರಸ್ ಯಾತ್ರೆಗೆ ಚಾಲನೆ ಸಿಕ್ಕಿತ್ತು.
ಮದ್ದೂರಿನಿಂದ ಹಾದು ಹೋಗಿ ಮಂಡ್ಯಕ್ಕೆ ತೆರಳಿ ಅಲ್ಲಿಯೂ ಝೈದ್ ಸಾರಥ್ಯದಲ್ಲಿ ರೋಡ್ ಶೋ ನಡೆಯಿತು. ಅಲ್ಲಿನ ದೇವಸ್ಥಾನ ದರ್ಗಾಗಳಿಗೂ ಭೇಟಿಯಿತ್ತ ಝೈದ್ ಒಂದು ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಐದು ಗಂಟೆ ಸುಮಾರಿಗೆ ಶ್ರೀರಂಗಪಟ್ಟಣಕ್ಕೆ ತೆರಳಿ ಅಲ್ಲಿಂದ ಸೀದಾ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿ, ತಾಯಿಯ ಆಶೀರ್ವಾದ ಪಡೆದುಕೊಂಡ ಬಳಿಕ ಮೈಸೂರು ನಗರದಲ್ಲಿ ಅದ್ದೂರಿಯಾಗಿ ರೋಡ್ ಶೋ ನಡೆದಿದೆ. ಬಳಿಕ ೮.೩೦ರ ಸುಮಾರಿಗೆ ಒಂದು ಸುತ್ತಿನ ಬೆಂಗಳೂರು-ಮೈಸೂರು ಯಾತ್ರೆ ಮುಗಿಸಿಕೊಂಡಿರುವ ಝೈದ್ ತಮ್ಮ ತಂಡ, ಅಭಿಮಾನಿಗಳೊಂದಿಗೆ ಬೆಂಗಳೂರಿಗೆ ಮರಳಿದ್ದಾರೆ. ಹೀಗೆ ಬನಾರಸ್ ಯಾತ್ರೆ ಹೋದಲ್ಲೆಲ್ಲ ಜನಜಂಗುಳಿ ನೆರೆದು ಝೈದ್ರನ್ನು ಸ್ವಾಗತಿಸಿದ್ದಾರೆ. ಈ ಪ್ರತಿಕ್ರಿಯೆ ಚಿತ್ರ ತಂಡಕ್ಕೆ ಹೊಸಾ ಭರವಸೆ ತಂದುಕೊಟ್ಟಿದೆ.
