ಕಿರುತೆರೆ ಮೂಲಕ ಬಣ್ಣದ ಬದುಕಿಗೆ ಎಂಟ್ರಿಕೊಟ್ಟ ನಟಿ ರಾಧಿಕ ಪಂಡಿತ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಸ್ಯಾಂಡಲ್ ವುಡ್ ನ ಬೆಸ್ಟ್ ಕಪಲ್ಸ್. ಯಶ್ ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿದ್ದರೆ ರಾಧಿಕಾ ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ ಯಶ್ ಹಾಗೂ ರಾಧಿಕಾರ ಮುದ್ದಿನ ಮಗ ಅಥರ್ವ ಬರ್ತಡೇ ಹಿನ್ನೆಲೆಯಲ್ಲಿ ಯಶ್ ಹಾಗೂ ರಾಧಿಕ ವಿಶೇಷ ಫೋಟೋ ಹಂಚಿಕೊಂಡು ವಿಶ್ ಮಾಡಿದ್ದಾರೆ.
ರಾಧಿಕ ಹಾಗೂ ಯಶ್ ರ ಎರಡನೇ ಮಗ ಯಥರ್ವ್ 3ನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ಯಥರ್ವ್ ನ ಹುಟ್ಟುಹಬ್ಬವನ್ನು ರಾಧಿಕಾ ಮತ್ತು ಯಶ್ ದಂಪತಿ ಸಂಭ್ರಮದಿಂದ ಆಚರಿಸಿದ್ದಾರೆ. ವಿಶೇಷ ಫೋಟೋ ಹಂಚಿಕೊಳ್ಳುವ ಮೂಲಕ ಮುದ್ದು ಮಗನಿಗೆ ಇಬ್ಬರೂ ಮನಸಾರೆ ಹಾರೈಸಿದ್ದು, ಅಭಿಮಾನಿಗಳು ಕೂಡ ಶುಭ ಹಾರೈಸಿದ್ದಾರೆ.

ನನ್ನ ಮುದ್ದು ಕಂದ ನನ್ನ ಹೃದಯವನ್ನು ತುಂಬಿದ್ದಾನೆ. ಹ್ಯಾಪಿ ಬರ್ತ್‌ಡೇ ಯಥರ್ವ್, ಸದಾ ಖುಷಿಯಾಗಿರು ಲವ್ ಯೂ ಎಂದು ರಾಧಿಕಾ ಪಂಡಿತ್ ವಿಶ್ ಮಾಡಿದ್ದಾರೆ.
ನನ್ನ ಪ್ರೀತಿಯ ಮುದ್ದು ಮಗ ಯಥರ್ವ್‌ನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಹೇಳಿದ್ದಾರೆ. ರಾಧಿಕಾ ತನ್ನ ಕಾಲು ಮೇಲೆ ಕೂರಿಸಿಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಯಥರ್ವ್ ಬಲೂನ್ ಹಿಡಿದು ನಿಂತಿರುವ ಫೋಟೋ ಹಂಚಿಕೊಂಡಿದ್ದಾರೆ.
ಇತ್ತೀಚಿಗಷ್ಟೆ ರಾಧಿಕಾ ಮನೆಯಲ್ಲಿ ದೀಪಾವಳಿ ಹಬ್ಬವನ್ನ ಅದ್ದೂರಿಯಾಗಿ ಆಚರಿಸಿ ಅವುಗಳ ಫೋಟೋವನ್ನು ಹಂಚಿಕೊಂಡಿದ್ದರು. ಯಶ್ ಹಾಗೂ ರಾಧಿಕ ಮಕ್ಕಳು ಜೊತೆ ಪೂಜೆ ಮಾಡಿ ಪಟಾಕಿ ಹೊಡೆದ ಸಂಭ್ರಮಿಸಿದ್ದರು.