• June 4, 2026

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ: ಆರೋಗ್ಯದ ಕುರಿತು ಮೊದಲ ಬಾರಿಗೆ ಮೌನ ಮುರಿದ ನಟಿ

ಟಾಲಿವುಡ್ ಸ್ಟಾರ್ ನಟಿ ಸಮಂತಾ ಆರೋಗ್ಯದ ಕುರಿತು ಕೆಲ ದಿನಗಳ ಹಿಂದೆ ಸುದ್ದಿಯೊಂದು ಹರಿದಾಡಿತ್ತು. ಆದ್ರೆ ಆ ಬಗ್ಗೆ ಮಾತನಾಡಿದ್ದ ಸಮಂತಾ ಮ್ಯಾನೇಜರ್ ಸಮಂತಾ ಆರಾಮಾವಾಗಿದ್ದಾರೆ. ಯಾವುದೇ ರೀತಿಯ ಕಾಯಿಲೆ ಇಲ್ಲ ಎಂದಿದ್ದರು. ಆದರೆ ಇದೀಗ ಸ್ವತಃ ಸಮಂತಾ ತಮ್ಮ ಕಾಯಿಲೆಯ ಕುರಿತು ಮೊದಲ ಭಾರಿಗೆ ಮಾತನಾಡಿದ್ದಾರೆ. ತಮ್ಮ ಕಾಯಿಲೆಯ ಕುರಿತು ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಷವಾಗಿ ಬರೆದುಕೊಂಡಿದ್ದಾರೆ. ನಾನು ಕಳೆದ ಕೆಲವು ತಿಂಗಳುಗಳಿಂದ “ಮಯೋಸಿಟಿಸ್” ಎಂಬ ಕಾಯಿಲೆಯಿಂದ ಬಳಲುತ್ತಿದ್ದೇನೆ. ವೈದ್ಯರು ನಾನು ಆದಷ್ಟು ಬೇಗ ಹುಷಾರಾಗುತ್ತೀನಿ ಎಂದು ಭರವಸೆ ವ್ಯಕ್ತಪಡಿಸುತ್ತಿದ್ದಾರೆ. ಯಾರು ಆತಂಕಕ್ಕೆ ಒಳಗಾಗಬಾರದು ಎಂದು ಸಮಂತಾ ಹೇಳಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಸಮಂತಾ ಜೊತೆಗೆ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಯಶೋದಾ ಚಿತ್ರದ ಟ್ರೈಲರ್ ಗೆ ನಿಮ್ಮ ಪ್ರತಿಕ್ರಿಯೆ ಅದ್ಭುತವಾಗಿದೆ. ಬದುಕು ನನ್ನ ಮುಂದೆ ಕೊನೆಯಿಲ್ಲದ ಸವಾಲುಗಳನ್ನು ಇಟ್ಟಿದೆ. ನಿಮ್ಮ ಪ್ರೀತಿ ಮತ್ತು ಬಾಂಧವ್ಯವು ಆ ಸವಾಲುಗಳನ್ನು ಎದುರಿಸಲು ನನಗೆ ಹೆಚ್ಚಿನ ನೈತಿಕತೆ ಮತ್ತು ಧೈರ್ಯವನ್ನು ನೀಡುತ್ತದೆ. ಕಳೆದ ಕೆಲವು ತಿಂಗಳುಗಳಿಂದ “ಮಯೋಸಿಟಿಸ್” ಎಂಬ ಆಟೋಇಮ್ಯೂನ್ ಸ್ಥಿತಿಗೆ ಚಿಕಿತ್ಸೆ ಪಡೆಯುತ್ತಿರುವೆ. ಈಗ ನನ್ನ ಆರೋಗ್ಯ ಸ್ಥಿರವಾಗಿದೆ. ನಾನು ಇದನ್ನು ನಿಮ್ಮೊಂದಿಗೆ ಸ್ವಲ್ಪ ತಡವಾಗಿ ಹಂಚಿಕೊಳ್ಳುತ್ತಿದ್ದೇನೆ ಎಂದು ಸಮಂತಾ ಬರೆದುಕೊಂಡಿದ್ದಾರೆ. ನಾನು ಒಳ್ಳೆಯ ದಿನ ಮತ್ತು ಕೆಟ್ಟ ದಿನಗಳನ್ನ ಹೊಂದಿದ್ದೇನೆ. ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಕೂಡ. ಇನ್ನೂ ಒಂದು ದಿನವನ್ನು ಎದುರಿಸಲು ಸಾಧ್ಯವಿಲ್ಲ ಎಂದು ಅನಿಸಿದಾಗಲೂ, ಹೇಗಾದರೂ ಆ ಕ್ಷಣ ಹಾದು ಹೋಗುತ್ತದೆ. ನಿಮ್ಮೆಲ್ಲರನ್ನೂ ನಾನು ಪ್ರೀತಿಸುತ್ತೇನೆ ಎಂದು ಸಮಂತಾ ಪೋಸ್ಟ್ ಮಾಡಿದ್ದಾರೆ. ಮೈಯೋಸಿಟಿಸ್ ಹೆಸರಿನ ಅಪರೂಪದ ಕಾಯಿಲೆ ಇದೆ. ಈ ಕಾಯಿಲೆ ಬಂದರೆ ವ್ಯಕ್ತಿ ಕುಗ್ಗುತ್ತಾನೆ. ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಸ್ನಾಯು ಸೆಳೆತ ಶುರುವಾಗುತ್ತದೆ. ಸ್ವಲ್ಪ ದೂರ ನಡೆದರೂ ಸುಸ್ತು ಎನಿಸುತ್ತದೆ. 30-60ರ ವಯಸ್ಸಿನವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಸರಿಯಾದ ಚಿಕಿತ್ಸೆ ಕೊಡದೆ ಇದ್ದರೆ ದಿನ ಕಳೆದಂತೆ ಪರಿಸ್ಥಿತಿ ಬೇರೆಯ ಹಂತಕ್ಕೆ ಹೋಗುತ್ತದೆ. ಈಗ ಸಮಂತಾ ಕೂಡ ಇದೇ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನೆಚ್ಚಿನ ನಟಿ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now