• March 14, 2026

ಅಪ್ಪು ಎಲ್ಲೂ ಹೋಗಿಲ್ಲ, ನಮ್ಮ ಜೊತೆಗೆ ಇದ್ದಾರೆ: ನಿರ್ದೇಶಕ ಚೇತನ್ ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ. ಇಂದು ಅದೆಷ್ಟೋ ಮಂದಿ ಅಪ್ಪು ಇಂದ ಜೀವನ ರೂಪಿಸಿಕೊಂಡಿದ್ದಾರೆ. ಸದ್ಯ ಪುನೀತ್ ರಾಜ್ ಕುಮಾರ್ ರಿಂದ ನಾನು ಇಂದು ನಿರ್ದೇಶಕನಾಗಿದ್ದೇನೆ ಎಂದು ಚಂದನವನದ ಸ್ಟಾರ್ ಡೈರೆಕ್ಟರ್ ಚೇತನ್ ಕುಮಾರ್ ಹೇಳಿದ್ದಾರೆ. ಅಪ್ಪು ನಿಧನಹೊಂದಿ ಇಂದಿಗೆ ಒಂದು ವರ್ಷ ಕಳೆದಿದೆ. ಈ ವೇಳೆ ಪುನೀತ್ ಬಗ್ಗೆ ಮಾತನಾಡಿದ ಚೇತನ್ ಕುಮಾರ್, ಪುನೀತ್ ಸರ್ ಇಲ್ಲ ಅನ್ನೋದನ್ನ ಇನ್ನೂ ನಂಬೋಕೆ ಆಗುತ್ತಿಲ್ಲ. ನಾನು ಕೂಡ ಸಾಕಷ್ಟು ಚಿತ್ರಗಳಲ್ಲಿ ಅವರ ಜೊತೆ ಕೆಲಸ ಮಾಡಿದೆ. ಇವತ್ತು ನಾನು ನಿರ್ದೇಶಕನಾಗಿರಲು ಅವರೇ ಕಾರಣ. ಒಂದು ವರ್ಷ ಹೇಗೆ ಕಳೆದಿದೆ ಅನ್ನೋದೆ ಗೊತ್ತಾಗುತ್ತಿಲ್ಲ. ಅವರು ಇದ್ದಗಲೂ ಸಾಕಷ್ಟು ಜನರಿಗೆ ಮಾದರಿಯಾಗಿದ್ರು, ಅಗಲಿದ ಬಳಿಕವು ಸಾಕಷ್ಟು ಜನರಿಗೆ ಮಾದರಿಯಾಗಿದ್ದಾರೆ. ಗಂಧದಗುಡಿ ಮೂಲಕವು ಸಾಕಷ್ಟು ಜನರಿಗೆ ಪ್ರೇರೇಪಿತರಾಗಿದ್ದಾರೆ ಎಂದರು. ಪುನೀತ್ ನಟನೆಯ ಕೊನೆಯ ಚಿತ್ರ ಜೇಮ್ಸ್ ಸಂದರ್ಭದಲ್ಲಿ ಅಪ್ಪು ಸರ್ ಕೊನೆಯ ದಿನಗಳಲ್ಲಿ ನಾನು ಜೊತೆಗಿದ್ದೆ. ಅಗಲಿಕೆಗೂ ಮೂರು ದಿನ ಮುನ್ನ ಅವರ ಮನೆಯಲ್ಲೇ ಫೋಟೋಶೂಟ್ ಮಾಡಿದ್ದೆವು. ಒಂದು ವರ್ಷ ಆಗಿದ್ದೆ ಗೊತ್ತಾಗಲಿಲ್ಲ. ಅಪ್ಪು ಸರ್ ಎಲ್ಲೂ ಹೋಗಿಲ್ಲ. ನಮ್ಮ ಮನದಲ್ಲೇ ಇದ್ದಾರೆ ಎಂದು ಅಪ್ಪು ನೆನೆದು ಭಾವುಕರಾದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now