• February 10, 2026

ಪುನೀತ್ ರಾಜ್ ಕುಮಾರ್ ನಟನೆಯ ಗಂಧದ ಗುಡಿ ನಮ್ಮ ಹೆಮ್ಮೆ: ನಟಿ ರಮ್ಯಾ

ಅಭಿಮಾನಿಗಳು ಸಾಕಷ್ಟು ಸಮಯದಿಂದ ಕುತೂಹಲದಿಂದ ಕಾಯುತ್ತಿದ್ದ ಆ ದಿನ ಬಂದೆ ಬಿಟ್ಟಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರ ಡ್ರೀಮ್ ಪ್ರಾಜೆಕ್ಟ್ ಗಂಧದ ಗುಡಿ ಸಿನಿಮಾ ತೆರೆಗೆ ಬಂದಿದೆ. ಅಭಿಮಾನಿಗಳು ಅಪ್ಪು ಅವರನ್ನು ತೆರೆ ಮೇಲೆ ನೋಡಿ ಕಣ್ಣೀರಿಟ್ಟಿದ್ದಾರೆ. ನಿನ್ನೆ ಅಂದರೆ ಅಕ್ಟೋಬರ್ 27ರಂದು ಅನೇಕ ಕಡೆ ಗಂಧದ ಗುಡಿ ಚಿತ್ರದ ಪ್ರೀಮಿಯರ್ ಶೋ ಹಮ್ಮಿಕೊಳ್ಳಲಾಗಿತ್ತು. ಪ್ರೀಮಿಯರ್ ಶೋನಲ್ಲಿ ಹಲವು ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ನಟಿ ರಮ್ಯಾ ಕೂಡ ಪ್ರೀಮಿಯರ್​ ಶೋಗೆ ಆಗಮಿಸಿದ್ದು, ಈ ವೇಳೆ ಅಪ್ಪು ಬಗ್ಗೆ ಮಾತನಾಡಿದ್ದಾರೆ. ‘ಅಪ್ಪು ಯಾವಾಗಲೂ ನನ್ನ ಫೇವರಿಟ್​ ಕೋ ಸ್ಟಾರ್​ ಆಗಿದ್ದರು. ಇದೇ ಕೊನೇ ಬಾರಿ ನಾವೆಲ್ಲರೂ ಅವರನ್ನು ದೊಡ್ಡ ಪರದೆ ಮೇಲೆ ನೋಡುವುದು. ಹಾಗಾಗಿ ಇದು ತುಂಬ ಎಮೋಷನಲ್​ ಆದಂತಹ ಕ್ಷಣ. ನಾನು ಕೂಡ ಕುತೂಹಲದಿಂದ ನೋಡಬೇಕು. 100 ಪರ್ಸೆಂಟ್ ನಾನು ಅಳುತ್ತೇನೆ. ಅದಂತೂ ಗ್ಯಾರಂಟಿ’ ಎಂದು ರಮ್ಯಾ ಹೇಳಿದ್ದಾರೆ. ‘ಈ ಸಾಕ್ಷ್ಯಚಿತ್ರ ನೋಡಲು ನಾನು ಕಾದಿದ್ದೆ. ಟ್ರೇಲರ್​ ನೋಡಿದಾಗ ನನಗೆ ತುಂಬ ಇಷ್ಟ ಆಗಿತ್ತು. ಛಾಯಾಗ್ರಹಣ ಅದ್ಭುತವಾಗಿದೆ. ಅಪ್ಪು ಮತ್ತು ಪ್ರಕೃತಿಯನ್ನು ನಾನು ಪ್ರೀತಿಸುತ್ತೇನೆ. ಆ ಎರಡು ಅಂಶಗಳು ಇದರಲ್ಲಿ ಇವೆ. ಅನುಭವ ಹೇಗಿರುತ್ತದೆ ಅಂತ ನೋಡೋಣ. ಪುನೀತ ಪರ್ವದಲ್ಲಿ ನಾನು ಡ್ಯಾನ್ಸ್ ಮಾಡಿದ್ದೇ ಅಪ್ಪುಗೋಸ್ಕರ. ಆ ಕ್ಷಣದಲ್ಲಿ ನಾನು ಅಪ್ಪು ಅವರನ್ನೇ ನೆನಪಿಸಿಕೊಳ್ಳುತ್ತಿದ್ದೆ. ಅವರನ್ನು ನಾನು ತುಂಬ ಮಿಸ್​ ಮಾಡಿಕೊಳ್ಳುತ್ತೇನೆ’ ಎಂದಿದ್ದಾರೆ ರಮ್ಯಾ. ‘ಈ ಸಾಕ್ಷ್ಯಚಿತ್ರ ನೋಡಲು ನಾನು ಕಾದಿದ್ದೆ. ಟ್ರೇಲರ್​ ನೋಡಿದಾಗ ನನಗೆ ತುಂಬ ಇಷ್ಟ ಆಗಿತ್ತು. ಛಾಯಾಗ್ರಹಣ ಅದ್ಭುತವಾಗಿದೆ. ಅಪ್ಪು ಮತ್ತು ಪ್ರಕೃತಿಯನ್ನು ನಾನು ಪ್ರೀತಿಸುತ್ತೇನೆ. ಆ ಎರಡು ಅಂಶಗಳು ಇದರಲ್ಲಿ ಇವೆ. ಅನುಭವ ಹೇಗಿರುತ್ತದೆ ಅಂತ ನೋಡೋಣ. ಪುನೀತ ಪರ್ವದಲ್ಲಿ ನಾನು ಡ್ಯಾನ್ಸ್ ಮಾಡಿದ್ದೇ ಅಪ್ಪುಗೋಸ್ಕರ. ಆ ಕ್ಷಣದಲ್ಲಿ ನಾನು ಅಪ್ಪು ಅವರನ್ನೇ ನೆನಪಿಸಿಕೊಳ್ಳುತ್ತಿದ್ದೆ. ಅವರನ್ನು ನಾನು ತುಂಬ ಮಿಸ್​ ಮಾಡಿಕೊಳ್ಳುತ್ತೇನೆ’ ಎಂದಿದ್ದಾರೆ ರಮ್ಯಾ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now