ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಪುನೀತ್ ಗೆ ಕರ್ನಾಟಕ ರತ್ನ ಪ್ರಧಾನ ಕಾರ್ಯಕ್ರಮಕ್ಕೆ ರಜನಿಕಾಂತ್, ಜೂ.NTRಗೆ ಆಹ್ವಾನ
ಇನ್ನೂ ನಟ ಜೂನಿಯರ್ ಎನ್ ಟಿ ಆರ್ ತಾಯಿ ಕರ್ನಾಟಕದವರು. ಜೊತೆಗೆ ಜೂನಿಯರ್ ಎನ್ ಟಿ ಆರ್ ಕೂಡ ರಾಜ್ ಕುಮಾರ್ ಕುಟುಂದೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದರು. ಪುನೀತ್ ರನ್ನು ಸಹೋದರ ಸಮನರಾಗಿ ಕಾಣುತ್ತಿದ್ದರು. ಹಾಗಾಗಿ ಇಬ್ಬರಿಗೂ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ನೀಡಲಾಗಿದೆ.
ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗಿದ್ದು, ಇಂಥದ್ದೊಂದು ಗೌರವಕ್ಕೆ ಈ ಮೊದಲು ಡಾ.ರಾಜ್ ಕುಮಾರ್ ಕೂಡ ಪಾತ್ರರಾಗಿದ್ದಾರೆ. ಕನ್ನಡ ಸಿನಿಮಾ ರಂಗದ ಸೇವೆಗಾಗಿ ಕರ್ನಾಟಕ ರತ್ನ ಪ್ರಶಸ್ತಿ ಪಡೆದ ತಂದೆ-ಮಗ ಎಂಬ ಖ್ಯಾತಿಗೂ ಈ ಇಬ್ಬರೂ ಪಾತ್ರರಾಗಿದ್ದಾರೆ. 1992ರಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ಇದುವರೆಗೂ ಕೇವಲ 9 ಮಂದಿಗೆ ಮಾತ್ರವೇ ನೀಡಲಾಗಿದೆ.
