• March 16, 2026

ಇಶಾ ಪೌಂಡೇಷನ್ ನಲ್ಲಿ ಒಟ್ಟಿಗೆ ಕಾಂತಾರ ವೀಕ್ಷಿಸಿದ 3000 ಜನ

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಚಿತ್ರ ದೊಟ್ಟ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕಾಂತಾರ ಈ ಮಟ್ಟಿಗಿನ ಸಕ್ಸಸ್ ಘಳಿಸದೆ ಅನ್ನೋ ಐಡಿಯಾ ಕೂಡ ಇಡೀ ಚಿತ್ರತಂಡಕ್ಕೆ ಇರಲಿಲ್ಲ ಅನಿಸುತ್ತೆ. ದಿನದಿಂದ ದಿನಕ್ಕೆ ಬಾಕ್ಸ್ ಆಫೀಸ್ ಕೊಳ್ಳೊ ಹೊಡೆಯುತ್ತಿರುವ ಕಾಂತಾರ ಚಿತ್ರ ಮತ್ತೊಂದು ದಾಖಲೆ ನಿರ್ಮಿಸಿದೆ. ಸೆ.30ರಂದು ಕನ್ನಡದಲ್ಲಿ ತೆರೆಕಂಡ ಕಾಂತಾರ ಬಳಿಕ ಪರಭಾಷೆಯಲ್ಲೂ ಸದ್ದು ಮಾಡಿತ್ತು. ದೇಶ, ವಿದೇಶದಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಕಾಂತಾರ ಬಿಗ್  ಬಜೆಟ್ ಸಿನಿಮಾಗಳನ್ನು ಹಿಂದಿಕ್ಕಿ ನಾಗಾಲೋಟದಲ್ಲಿ ಮುನ್ನುಗುತ್ತಿದೆ. ಈಗಾಗ್ಲೆ ಕೋಟ್ಯಾಂತರ ಮಂದಿ ಕಾಂತಾರ ಚಿತ್ರ ವೀಕ್ಷಿಸಿದ್ದು, ಇದೀಗ ಕೊಯಮತ್ತೂರಿನ ಇಶಾ ಫೌಂಡೇಷನ್​ನಲ್ಲಿ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಹಿಟ್ ಕನ್ನಡ ಸಿನಿಮಾ ಕಾಂತಾರ ಬಾಕ್ಸ್ ಆಫೀಸ್ ದಾಖಲೆಗಳನ್ನು ಬ್ರೇಕ್ ಮಾಡುತ್ತಿದೆ. ಹೊಂಬಾಳೆ ಫಿಲ್ಮ್ಸ್ ತಂಡ ಕೊಯಮತ್ತೂರಿನ ಇಶಾ ಯೋಗ ಸೆಂಟರ್​ನಲ್ಲಿ ದೀಪಾವಳಿ ಹಬ್ಬದ ಸಂದರ್ಭ ವಿಶೇಷ ಪ್ರದರ್ಶನವನ್ನು ಆಯೋಜಿಸಿತ್ತು. ಹೊಂಬಾಳೆ ಫಿಲ್ಮ್ಸ್ ಹಾಗೂ ರಿಷಬ್ ಶೆಟ್ಟಿ ಅವರಿಗೆ ವಿಶೇಷ ಧನ್ಯವಾದಗಳು ಎಂದು ಇಶಾ ಫೌಂಡೇಷನ್ ಟ್ವೀಟ್ ಮೂಲಕ ತಿಳಿಸಿದೆ. ಅಲ್ಲದೆ ಮೂರು ಸಾವಿರ ಜನ ಒಟ್ಟಿಗೆ ಚಿತ್ರ ವೀಕ್ಷಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದೆ. ಕರಾವಳಿಯ ಭೂತ ಕೋಲದ ಕುರಿತಾದ ಕಾಂತಾರ ಚಿತ್ರವನ್ನು ಇಡೀ ಜಗತ್ತೆ ಮೆಚ್ಚಿಕೊಂಡಿದೆ. ಈಗಾಗ್ಲೆ ಸಾಕಷ್ಟು ಸ್ಟಾರ್ ನಟ, ನಟಿಯರು ಕಾಂತಾರ ವೀಕ್ಷಿಸಿದ್ದು ಮೆಚ್ಚುಗೆಯ ಮಾತನಾಡಿದ್ದಾರೆ. ಅಲ್ಲದೆ ಪ್ರತಿಯೊಬ್ಬರು ಕಾಂತಾರ ಚಿತ್ರವನ್ನು ವೀಕ್ಷಿಸಿ ಎಂದಿದ್ದರು. ಇತ್ತೀಚೆಗೆ ಕೇರಳದಲ್ಲಿ ಕಾಂತಾರ ಹೌಸ್ ಫುಲ್ ಪ್ರದರ್ಶನ ಕಂಡಿತ್ತು. ಈ ವೇಳೆ ಚಿತ್ರಮಂದಿರದ ಫೋಟೋವನ್ನು ಶೇರ್ ಮಾಡಲಾಗಿತ್ತು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now