• June 21, 2026

ಕಾಂತಾರ ಚಿತ್ರ ನೋಡಿ ನಾನು ದಿಗ್ಭ್ರಮೆಗೊಂಡೆ: ನಟಿ ಪೂಜಾ ಹೆಗ್ಡೆ

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾಗೆ ಕೋಟ್ಯಾಂತರ ಮಂದಿ ಜೈ ಅಂದಿದ್ದಾರೆ. ಇಂಡಿಯಾ ಸಿನಿಮಾಗೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗ್ಲೆ ಸಾಕಷ್ಟು ಸ್ಟಾರ್ ನಟ, ನಟಿಯರು, ಕಲಾವಿದರು ಸೇರಿದಂತೆ ಪ್ರತಿಯೊಬ್ಬರು ಸಿನಿಮಾ ಮೆಚ್ಚಿಕೊಂಡಿದ್ದಾರೆ. ಇದೀಗ ನಟಿ ಪೂಜಾ ಗಾಂಧಿ ಚಿತ್ರದ ಕುರಿತಾಗಿ ಮೆಚ್ಚುಗೆ ಮಾತನಾಡಿದ್ದಾರೆ. ತೆಲುಗು ಭಾಷೆಯಲ್ಲಿ ‘ಕಾಂತಾರ’ ಸಿನಿಮಾ ನೋಡಿದ ಪೂಜಾ ಹೆಗ್ಡೆ, ‘ನಿಮಗೆ ತಿಳಿದಿದ್ದನ್ನು ಬರೆಯಿರಿ. ನಿಮ್ಮ ಹತ್ತಿರದ ಹೃದಯಕ್ಕೆ ಹೃಯದಿಂದ ಕಥೆ ಹೇಳಿ. ಚಿತ್ರದ ಕೊನೆಯ 20 ನಿಮಿಷಗಳು ನನಗೆ ನಡುಕ ಹುಟ್ಟಿಸಿತು. ನಾನು ದಿಗ್ಭ್ರಮೆಗೊಂಡೆ ಮತ್ತು ಸಂಪೂರ್ಣ ವಿಸ್ಮಯಗೊಂಡಿದ್ದೇನೆ. ರಿಷಬ್ ಶೆಟ್ಟಿಯವರ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ನೋಡಿ ಹೆಮ್ಮೆಯಾಗುತ್ತಿದೆ’ ಎಂದು ಚಿತ್ರದ ಕುರಿತು ಮೆಚ್ಚುಗೆಯ ಮಾತನಾಡಿದ್ದಾರೆ. ‘ಕಾಂತಾರ’ ಚಿತ್ರ ನೋಡಿ ನನ್ನ ಬಾಲ್ಯದ ನೆನಪುಗಳು ಮರುಕಳಿಸಿದವು. ನಾನು ಬಾಲ್ಯದಲ್ಲಿ ನೋಡಿದ ಕೋಲ, ಭೂತ, ದೈವಾರಾಧನೆ ಇವುಗಳ ಬಗ್ಗೆ ತುಂಬಾ ಗೌರವದಿಂದ ಮತ್ತು ಅಷ್ಟೇ ಸುಂದರವಾಗಿ ಸಿನಿಮಾ ಮಾಡಲಾಗಿದೆ. ಮತ್ತಷ್ಟು ಶಕ್ತಿ ಸಿಗಲಿ ನಿಮಗೆ. ಎಲ್ಲರೂ ಸಿನಿಮಾವನ್ನು ವೀಕ್ಷಿಸಿ ಎಂದು ಪೂಜಾ ಹೆಗ್ಡೆ ಬರೆದುಕೊಂಡದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳ ಮೂಲದವರಾದ ಪೂಜಾ ಹೆಗ್ಡೆ ಹುಟ್ಟಿ ಬೆಳೆದಿದ್ದೆಲ್ಲಾ ಮುಂಬೈನಲ್ಲಿ. ಆದರೂ ಪೂಜಾಗೆ ತುಳು ನಾಡಿನ ಸಂಸ್ಕೃತಿಯ ಕುರಿತಾಗಿ ಅಪಾರ ಗೌರವವಿದೆ. ಅಲ್ಲದೆ ಪೂಜಾ ಆಗಾಗ ತನ್ನ ಅಜ್ಜಿ, ತಾತನ ಊರಿಗೆ ಬರುತ್ತಿರುತ್ತಾರೆ. ಇತ್ತೀಚೆಗಷ್ಟೇ ಪೂಜೆ ಹೆಗ್ಡೆ ಉಡುಪಿ ಜಿಲ್ಲೆಯ ಕಾಪು ಮಾರಿ ಗುಡಿಗೆ ಭೇಟಿ ನೀಡಿದ್ದರು. ಈಗಾಗ್ಲೆ ಕಾಂತಾರ ಸಿನಿಮಾಗೆ ಸಾಕಷ್ಟು ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. ನಟ ಪ್ರಭಾಸ್, ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ, ಕಂಗಾನ ರಣಾವತ್, ವಿವೇಕ್ ಅಗ್ನಿಹೋತ್ರಿ ಚಿತ್ರ ನೋಡಿ ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಕಂಗನಾ ಕಾಂತಾರವನ್ನು ಚಿತ್ರವನ್ನು ಆಸ್ಕರ್ ಗೆ ಕಳುಹಿಸಲು ಮನವಿ ಮಾಡಿದ್ದಾರೆ. ಇದೀಗ ನಟಿ ಪೂಜಾ ಹೆಗ್ಡೆ ಕಾಂತಾರವನ್ನು ಮೆಚ್ಚಿಕೊಂಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now