• March 14, 2026

ಜಾನ್ವಿ ಸೌಂದರ್ಯಕ್ಕೆ ಕ್ಲೀನ್ ಬೋಲ್ಡ್ ಆದ ಫ್ಯಾನ್ಸ್

ಎವರ್ ಗ್ರೀನ್ ಬ್ಯೂಟಿ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಬಾಲಿವುಡ್ ಚಿತ್ರರಂಗದಲ್ಲಿ ಮಿಂಚು ಹರಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಜಾನ್ವಿ ಮತ್ತಷ್ಟು ಗ್ಲಾಮರಸ್ ಆಗಿ ಕಾಣಿಸಿಕೊಳ್ತಿದ್ದಾರೆ. ಆಕೆಯ ಸೌಂದರ್ಯಕ್ಕೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಜಾನ್ವಿ ಹೋದಲ್ಲಿ ಬಂದಲೆಲ್ಲಾ ತಮ್ಮ ಬ್ಯೂಟಿಯಿಂದಲೇ ಸಖತ್ ಸದ್ದು ಮಾಡುತ್ತಿದ್ದಾರೆ. ಬಾಡಿಕಾನ್ ಡ್ರೆಸ್ ನಲ್ಲಿ ಮಿಂಚುತ್ತಿರುವ ಜಾನ್ವಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ಬಿಟೌನ್ ಸ್ಟಾರ್ ನಟಿಯರಾದ ದೀಪಿಕಾ ಪಡುಕೋಣೆ, ಮಲೈಕಾ ಅರೋರ, ಕರೀನಾ ಕಪೂರ್ ಸೇರಿದಂತೆ ಸಾಕಷ್ಟು ನಟಿಯರು ತಮ್ಮ ಸ್ಟೈಲಿಶ್ ಡ್ರಸ್ ಗಳ ಮೂಲಕವೇ ಸದ್ದು ಮಾಡುತ್ತಿರುತ್ತಾರೆ. ಇದೀಗ ಆ ಲೀಸ್ಟ್ ಗೆ ಜಾನ್ವಿ ಕಪೂರ್ ಸೇರಿಕೊಂಡಿದ್ದು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಬಾಲಿವುಡ್ ಮಂದಿ ದೀಪಾವಳಿಯ ಸಂಭ್ರಮದಲ್ಲಿ ತೊಡಗಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗುವ ನಟಿಯರು ತಮ್ಮ ಸ್ಟೈಲಿಶ್ ಡ್ರಸ್ ಗಳ ಮೂಲಕವೇ ಸದ್ದು ಮಾಡುತ್ತಿದ್ದಾರೆ. ಭೂಮಿ ಪಡ್ನೆಕರ್ ನಿವಾಸದಲ್ಲಿ ದೀಪಾವಳಿ ಪಾರ್ಟಿ ಆಯೋಜಿಸಿದ್ದು ಈ ವೇಳೆ ಜಾನ್ವಿ ಕ್ಯಾತ ಸೆಲೆಬ್ರೆಟಿ ಡಿಸೈನರ್ ಮನೀಶ್ ಮಲ್ಹೋತ್ರಾ ಡಿಸೈನ್ ಮಾಡಿರುವ ಉಡುಗೆ ತೊಟ್ಟು ಕಂಗೊಳಿಸುತ್ತಿದ್ದಾರೆ. ಜಾನ್ವಿ ನಟನೆಯ ಮಿಲಿ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ. ಮಿಲಿ ಮಲಯಾಳಂನ ಸೂಪರ್ ಹಿಟ್ ಹೆಲೆನ್ ಸಿನಿಮಾದ ರಿಮೇಕ್ ಆಗಿದ್ದು ಚಿತ್ರಕ್ಕೆ ಬೋನಿ ಕಪೂರ್ ಬಂಡವಾಳ ಹೂಡಿದ್ದಾರೆ. ಅಲ್ಲದೆ ಇದೇ ಮೊದಲ ಭಾರಿಗೆ ಬೋನಿ ಕಪೂರ್, ಜಾನ್ವಿ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now