ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸುದೀಪ್ ಅನುಪಸ್ಥಿತಿಯಲ್ಲಿ ನಡೆಯಿತು ಎಲಿಮಿನೇಷನ್ ಪ್ರಕ್ರಿಯೆ: ಬಿಗ್ ಬಾಸ್ ಮನೆಯಿಂದ ಮಯೂರಿ ಔಟ್
ಧಾರವಾಹಿ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ನಟಿ ಮಯೂರಿ ಆ ಬಳಿಕ ಸಿನಿಮಾದಲ್ಲೂ ಸಾಕಷ್ಟು ಖ್ಯಾತಿ ಘಳಿಸಿದ್ದರು. ಸಾಕಷ್ಟು ಆಫರ್ ಗಳು ಬರುತ್ತಿರುವ ಸಮಯದಲ್ಲೇ ಮಯೂರಿ ಹಸೆಮಣೆ ಏರಿದ್ದರು. ಮಗುವಾದ ಬಳಿಕ ಚಿತ್ರರಂಗದಿಂದ ದೂರವಿದ್ದ ಮಯೂರಿ ಮಗನ ಲಾಲನೆ, ಪಾಲನೆಯಲ್ಲಿ ತೊಡಗಿಕೊಂಡಿದ್ದರು.
ಬಿಗ್ ಬಾಸ್ ಆಫರ್ ಬಂದಾಗ ಸಾಕಷ್ಟು ಯೋಜಿಸಿ ದೊಡ್ಮನೆ ಒಳಗೆ ಕಾಲಿಟ್ಟಿದ್ದರು. ಒಂದೂವರೆ ವರ್ಷದ ಮಗುವನ್ನು ಬಿಟ್ಟು ಹೋಗಿದ್ದರು. ಆದರೆ ಇದೀಗ ದೊಡ್ಮನೆಯಿಂದ ಹೊರ ಬಂದಿದ್ದಾರೆ. ವೀಕೆಂಡ್ ನಲ್ಲಿ ನೇಹಾ ಮತ್ತು ಮಯೂರಿ ನಡುವೆ ಜಟಾಪಟಿ ಇತ್ತು. ಆ ಪೈಕಿ ಮಯೂರಿ ಔಟ್ ಆದರು. ಸದಾ ಮಗುವಿನ ಚಿಂತೆಯಲ್ಲಿ ಇರುತ್ತಿದ್ದ ಮಯೂರಿ ಇದೀಗ ಮನೆಯಿಂದ ಔಟ್ ಆಗಿದ್ದಾರೆ.
