• February 10, 2026

ಮಹಾರಾಜ ಎಲ್ಲಿದ್ದರು ಮಹಾರಾಜನೇ: ಕೋಹ್ಲಿಯನ್ನು ಕೊಂಡಾಡಿದ ಸುದೀಪ್

ಮೆಲ್ಬೋರ್ನ್ ನಲ್ಲಿ ಪಾಕಿಸ್ಥಾನ ವಿರುದ್ದ ನಡೆದ ಐಸಿಸಿ ಟಿ20 ವಿಶ್ವಕಪ್ ರೋಚಕ ಹಣಾಹಣಿಯಲ್ಲಿ ಭಾರತ ತಂಡ ಅಭೂತ ಪೂರ್ವ ಗೆಲುವು ಸಾಧಿಸಿದೆ. ಗೆಲುವು ಸಾಧಿಸುತ್ತಿದ್ದಂತೆ ದೇಶದ ವಿವಿಧೆಡೆ ಬೈಕ್ ರ್ಯಾಲಿ, ಭಾರತದ ರಾಷ್ಟ್ರ ಧ್ವಜಗಳನ್ನು ಹಿಡಿದು ಕೊಹ್ಲಿ ಇಸ್ ಕಿಂಗ್ ಎಂಬ ಘೋಷಣೆಗಳನ್ನು ಕೂಗುತ್ತಿದ್ದಾರೆ. ನಟ ಕಿಚ್ಚ ಸುದೀಪ್ ಕೂಡ ಪಂದ್ಯ ವೀಕ್ಷಿಸಿ ಕೋಹ್ಲಿಯನ್ನು ಕೊಂಡಾಡಿದ್ದಾರೆ. ಭಾನುವಾರ ನಡೆದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಟಿ೨೦ ವಿಶ್ವ ಕಪ್‌ ಪಂದ್ಯವನ್ನು ವೀಕ್ಷಿಸಲು ಪತ್ನಿ ಪ್ರಿಯಾ ಜೊತೆ ಸುದೀಪ್ ಮೆಲ್ಬೋರ್ನ್‌ಗೆ ಹೋಗಿದ್ದಾರೆ. ಕ್ರಿಕೆಟ್ ವೀಕ್ಷಿಸಿದ ಸುದೀಪ್ ದಂಪತಿ ಬಳಿಕ ಆ ಸಂಭ್ರಮವನ್ನು ಸೋಷಿಯಲ್ ಮೀಡಿಯಾದ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಭಾರತ ತಂಡ ರೋಚಕ ಗೆಲುವು ಸಾಧಿಸುತ್ತಿದ್ದಂತೆ ಇನ್‌ಸ್ಟಾಗ್ರಾಮ್‌ ಮೂಲಕ ಖುಷಿ ಹಂಚಿಕೊಂಡ ಸುದೀಪ್ , ಮಹಾರಾಜಾ ಎಲ್ಲಿದ್ದರೂ ಮಹಾರಾಜನೇ ತಾನೆ ಎಂದಿದ್ದಾರೆ. ಕಿಚ್ಚ ಸುದೀಪ್‌ ಬಿಗ್‌ ಬಾಸ್‌ ರಿಯಾಲಿಟಿ ಶೋನಿಂದ ಬಿಡುವು ಪಡೆದುಕೊಂಡು ಪತ್ನಿಯೊಂದಿಗೆ ಮೆಲ್ಬೋರ್ನ್‌ಗೆ ತೆರಳಿದ್ದರು. ಕ್ರಿಕೆಟ್‌ ಅಟಗಾರ ಹಾಗೂ ಟೀಮ್‌ ಇಂಡಿಯಾದ ಅಪ್ಪಟ ಅಭಿಮಾನಿಯಾಗಿರುವ ಸುದೀಪ್ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ವೀಕ್ಷಿಸಿ ಗೆಲುವನ್ನು ಸಂಭ್ರಮಿಸಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now