ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಬಿಗ್ ಬಾಸ್ ಮನೆಗೆ ಮತ್ತೆ ಸೋನು ಗೌಡ ಎಂಟ್ರಿ: ಅಸಮಾಧಾನ ಹೊರ ಹಾಕಿದ ನೆಟ್ಟಿಗರು
ಸೋನು ಬಿಗ್ ಬಾಸ್ ಎಂಟ್ರಿಗೆ ಸಾಕಷ್ಟು ಮಂದಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಒಟಿಟಿಯಲ್ಲಿ ಗೆದ್ದವರಿಗೆ ಮಾತ್ರವೇ ಬಿಗ್ ಬಾಸ್ ಟಿವಿ ಶೋಗೆ ಎಂಟ್ರಿ ಎಂದು ಹೇಳಲಾಗಿತ್ತು. ಆದರೆ ಇದೀಗ ಬಿಗ್ ಬಾಸ್ ಮಾತು ತಪ್ಪಿದೆ. ಸೋನು ಗೌಡ ಬದಲಿಗೆ ಹೊಸ ಪ್ರತಿಭೆಗಳನ್ನು ಕರೆತನ್ನಿ ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ.
ಸೋನು ಗೌಡ ಎಂಟ್ರಿಗೆ ಸಾಕಷ್ಟು ಮಂದಿ ವಿರೋಧ ವ್ಯಕ್ತಪಡಿಸಿದ್ದರು. ಇಂಥವರಿಂದ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕೆಟ್ಟ ಹೆಸರು. ಆಕೆಯನ್ನು ಬಿಗ್ ಬಾಸ್ ಮನೆಗೆ ಕರೆ ತರಬಾರದು ಎನ್ನಲಾಗಿತ್ತು. ಆದರೂ ಸೋನು ಗೌಡ ಎಂಟ್ರಿ ಕೊಟ್ಟು ಫೈನಲ್ ಹಂತ ತಲುಪಿದ್ದರು. ಇದೀಗ ಮತ್ತೆ ಬಿಗ್ ಬಾಸ್ ಟಿವಿ ಶೋಗೆ ಎಂಟ್ರಿಕೊಡ್ತಿದ್ದಾರೆ ಎಂಬ ಸುದ್ದಿಗೆ ಸಾಕಷ್ಟು ಮಂದಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
