• March 18, 2026

ಕಾಂತಾರದಂತ ಸಿನಿಮಾವನ್ನು ನಾನು ನೋಡಿರಲಿಲ್ಲ: ನಿರ್ದೇಶಕ ವಿವೇಕ್ ಅಗ್ನಿಹೋತ್ರಿ

ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾಗೆ ಕೋಟ್ಯಾಂತರ ಮಂದಿ ಜೈ ಅಂದಿದ್ದಾರೆ. ಈಗಾಗ್ಲೆ ಸಾಕಷ್ಟು ಸ್ಟಾರ್ ನಟ, ನಟಿಯರು, ಕಲಾವಿದರು ಸೇರಿದಂತೆ ಪ್ರತಿಯೊಬ್ಬರು ಸಿನಿಮಾ ಮೆಚ್ಚಿಕೊಂಡಿದ್ದಾರೆ. ಇದೀಗ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಿನಿಮಾ ಮೆಚ್ಚಿಕೊಂಡಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಮೂಲಕ ಸಖತ್ ಖ್ಯಾತಿ ಘಳಿಸಿದ ವಿವೇಕ್ ಅಗ್ನಿಹೋತ್ರಿ ಕಾಂತಾರ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. `ಕಾಂತಾರ’ ಸಿನಿಮಾ ನೋಡಿ ಬಂದೆ. ಇದೊಂದು ಅದ್ಭುತ ಅನುಭವ ಕೊಟ್ಟ ಚಿತ್ರ. ಈ ರೀತಿಯ ಚಿತ್ರವನ್ನು ನೀವು ನೋಡಿರುವುದಿಲ್ಲ. ನಾನಂತೂ ಈ ರೀತಿಯ ಸಿನಿಮಾವನ್ನು ನೋಡಿರಲಿಲ್ಲ. ರಿಷಬ್ ಶೆಟ್ಟಿಗೆ ಹ್ಯಾಟ್ಸ್ ಆಫ್. ರಿಷಬ್ ನೀವು ಅದ್ಭುತ ಕೆಲಸ ಮಾಡಿದ್ದೀರಿ. ನಾನು ನಿಮಗೆ ಕರೆ ಮಾಡಿ ಮಾತನಾಡುತ್ತೇನೆ. ನನ್ನ ಅನುಭವವನ್ನು ಹಂಚಿಕೊಳ್ಳದೇ ಇರಲು ಸಾಧ್ಯವಾಗಲಿಲ್ಲ. ಕಲೆ, ಜಾನಪದ ವಿಚಾರಗಳು ಸಿನಿಮಾದಲ್ಲಿ ಅಡಗಿದೆ. ಸಿನಿಮಾದ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ. ನಿಮ್ಮ ಬಳಿ ಇರುವುದು ಅದೆಂತಹ ಎನರ್ಜಿ. ನಾನು ಈವರೆಗೆ ನೋಡಿಲ್ಲ. ರಿಷಬ್ ಶೆಟ್ಟಿ ಮಾಡಿದ ಮಾಸ್ಟರ್‌ಪೀಸ್ ಈ ಸಿನಿಮಾದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಹಾಡಿ ಹೊಗಳಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now