ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಯಾರು ಕರೆಯದ ಹೆಸರಿನಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನು ಕರೆಯುತ್ತಿದ್ರು ಸುಧಾಮೂರ್ತಿ
ಅಪ್ಪು ಅವರನ್ನು ನಾನು ಯಾವಾಗಲೂ ಲೋಹಿತ್ ಎಂದೇ ಕರೆಯುತ್ತಿದ್ದೆ ಏಕೆಂದರೆ ಆತನ ಚಿತ್ರಗಳನ್ನು ನಾನು ಲೋಹಿತ್ ಆಗಿದ್ದಾಗ ಹೆಚ್ಚಾಗಿ ನೋಡಿದ್ದೆ ಎಂದರು. ಹೀಗಾಗಿ ಅಪ್ಪು ಎಂದಾಗಲಿ, ಪುನೀತ್ ಎಂದಾಗಲಿ ಕರೆಯಲು ನನಗೆ ಮನಸ್ಸು ಬರುವುದಿಲ್ಲ. ಅವರು ಸಿಕ್ಕಾಗಲೆಲ್ಲ ಲೋಹಿತ್ ಎಂದೇ ಕರೆಯುತ್ತಿದ್ದೆ ಎಂದು ತಿಳಿಸಿದರು.
ಪುನೀತ್ ಬಾಲನಟನಾಗಿ, ಮಾಸ್ಟರ್ ಲೋಹಿತ್ ಆಗಿ ಬಣ್ಣ ಹಚ್ಚಿದ್ದ ಭಾಗ್ಯವಂತ, ಭಕ್ತ ಪ್ರಹ್ಲಾದ ಹಾಗೂ ಬೆಟ್ಟದ ಹೂ ಚಿತ್ರಗಳನ್ನು ನೋಡಿದ್ದೆ ಎಂಬ ತಮ್ಮ ಹಳೆ ನೆನಪುಗಳನ್ನು ಸುಧಾಮೂರ್ತಿ ಅವರು ಪುನೀತ ಪರ್ವ ವೇದಿಕೆ ಮೇಲೆ ಮೆಲುಕು ಹಾಕಿದರು. ಹಾಗೂ ಇತ್ತೀಚಿನ ದಿನಗಳಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ ರಾಜಕುಮಾರ ಚಿತ್ರವನ್ನು ವೀಕ್ಷಿಸಿದ್ದೆ ಎಂದು ಸುಧಾ ಮೂರ್ತಿ ವೇದಿಕೆ ಮೇಲೆ ತಿಳಿಸಿದರು.
