• January 1, 2026

ಅಪ್ಪು ನೆನೆದು ವೇದಿಕೆ ಮೇಲೆ ಕಣ್ಣೀರು ಹಾಕಿದ ಅಶ್ವಿನಿ ಪುನೀತ್ ರಾಜ್ ಕುಮಾರ್

ಪುನೀತ್ ರಾಜ್ ಕುಮಾರ್ ನಟನೆಯ ಗಂಧದ ಗುಡಿ ಚಿತ್ರದ ಪ್ರೀರಿಲೀಸ್ ಕಾರ್ಯಕ್ರಮವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಾಕಷ್ಟು ಅದ್ದೂರಿಯಾಗಿ ನಡೆಸಲಾಯಿತು. ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ಸಿನಿಮಾ ರಂಗದವರ ಜೊತೆ ಪರಭಾಷೆಯ ಕಲಾವಿದರು ಸಾಥ್ ನೀಡಿದ್ದರು. ಈ ವೇಳೆ ವೇದಿಕೆ ಏರಿದ ಅಶ್ವೀನಿ ಪುನೀತ್ ರಾಜ್ ಕುಮಾರ್ ಗಳಗಳನೆ ಕಣ್ಣಿರಿಟ್ಟು ವೇದಿಕೆಯಿಂದ ಇಳಿದು ಹೋದರು. ವೇದಿಕೆ ಮೇಲೆ ಅಶ್ವಿನಿ ಪುನೀತ್ ರಾಜ್‌ ಕುಮಾರ್, ಪುತ್ರಿ ವಂದಿತ, ಡಾ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ವಿನಯ್ ರಾಜ್ ಕುಮಾರ್, ಯುವ ರಾಜ್‍ಕುಮಾರ್ ಸೇರಿದಂತೆ ದೊಡ್ಮನೆ ಕುಟುಂಬಸ್ಥರು ಅಪ್ಪು ನಟನೆಯ ಬ್ಲಾಕ್ ಬಾಸ್ಟರ್ ಹಿಟ್ ರಾಜಕುಮಾರ ಸಿನಿಮಾದ ನೀನೇ ರಾಜಕುಮಾರ ಹಾಡನ್ನು ಕಣ್ಣಿರಿಡುತ್ತಲೆ ಹಾಡಿದರು.     ಇಡೀ ಹಾಡನ್ನು ದುಃಖದಲ್ಲೇ ಹಾಡಿದ  ಅಶ್ವಿನಿ ಪುನೀತ್ ರಾಜ್ ಕುಮಾರ್ ಕಣ್ಣೀರು ಹಾಕುತ್ತಾ, ಅಭಿಮಾನಿಗಳಿಗೆ ನಮಸ್ಕರಿಸಿ ವೇದಿಕೆ ಮೇಲಿಂದ ಹೊರ ನಡೆದಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿ ಹಾಜರಿದ್ದ ಅಷ್ಟು ಮಂದಿಯೂ ಭಾವುಕರಾದರು. ಜೊತೆಗೆ ಹಾಡು ಮುಗಿಯುತ್ತಿದ್ದಂತೆ ಅಪ್ಪು ಅಪ್ಪು ಎಂದು ಜೈ ಹಾಕರ ಹಾಕಿದರು.     ಇದೇ ಅ.28ರಂದು ಗಂಧದ ಗುಡಿ ಸಿನಿಮಾ ತೆರೆಗೆ ಬರ್ತಿದೆ. ಅತ್ತ ದೊಡ್ಮನೆ ಕುಟುಂಬ ಅದ್ದೂರಿಯಾಗಿ ಚಿತ್ರದ ಪ್ರಿಲೀಸ್ ಕಾರ್ಯಕ್ರಮ ಮಾಡುತ್ತಿದ್ದರೆ ಇತ್ತ ಅಭಿಮಾನಿಗಳು ಸಿನಿಮಾ ಬಿಡುಗಡೆಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now