ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಗಂಧದ ಗುಡಿ ಕೆಜಿಎಫ್ ಚಿತ್ರದ ರೆಕಾರ್ಡ್ ಬ್ರೇಕ್ ಮಾಡ್ಬೇಕು: ರಾಕಿಂಗ್ ಸ್ಟಾರ್ ಯಶ್
ಪುನೀತ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, `ಗಂಧದ ಗುಡಿ ಸಿನಿಮಾ ಎಲ್ಲಾ ರೆಕಾರ್ಡ್ ಗಳನ್ನು ಧೂಳ್ ಮಾಡಬೇಕು. ಕೆಜಿಎಫ್ ಸಿನಿಮಾದ ರೆಕಾರ್ಡ್ಸ್ ಕೂಡ ಇರಬಾರದು. ಅರ್ಥ ಆಯ್ತಾ? ಮನೆ ಮನೆಯಲ್ಲಿ ಪ್ರತಿಯೊಬ್ಬರೂ ನೋಡಬೇಕಾದ ಸಿನಿಮಾ ಇದು. ಇಂಥ ಒಳ್ಳೆ ಜೀವದೊಂದಿಗೆ ಸಿನಿಮಾ ಸಂಭ್ರಮಿಸೋಣ ಅಂತಾ ಅಭಿಮಾನಿಗಳಲ್ಲಿ ಯಶ್ ಮನವಿ ಮಾಡಿದ್ದಾರೆ.
ನಮ್ಮದೆಲ್ಲಾ ಏನೋ ಸಾಧನೆ ಅನ್ನುವಾಗ, ಸಾಧನೆ ಅಂದ್ರೆ ಇದು ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಆ ಉದ್ದೇಶಕ್ಕಾದರೂ ಸಿನಿಮಾ ಗೆಲ್ಲಿಸಬೇಕು ಎಂದು ಯಶ್ ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಯಶ್, ಒಂದು ವರ್ಷದ ಕೆಳಗೆ ಹತ್ತಿರ ಇದೇ ದಿನ ಅಪ್ಪು ಸರ್, ಶಿವಣ್ಣ ಮತ್ತು ನಾನು ಸ್ಟೇಜ್ ಮೇಲೆ ಡಾನ್ಸ್ ಮಾಡಿದ್ದು ಇನ್ನು ನೆನಪಿದೆ. ತುಂಬಾ ದಿನ ಆಗಿತ್ತು ಸಿಗದೆ ಅವತ್ತು ಸಿಕ್ಕದ್ರು. ತುಂಬಾ ಮಾತನಾಡ್ವಿ. ಅವರನ್ನು ನೋಡಿದ್ರೆ ನನಗೆ ಹೊಮ್ಮಸ್ಸು ಬರ್ತಿತ್ತು. ಅವರ ಡಾನ್ಸ್, ಫೈಟ್ ನೋಡಿ ಅವರ ತರ ಮಾಡಬೇಕು ಎನ್ನುವುದು ಎಷ್ಟೋ ಜನಕ್ಕೆ ಸ್ಪೂರ್ತಿ ಎಂದರು. ಅಪ್ಪು ಸರ್ ಘಟನೆ ನನಗೆ ಜೀವನ ಎಂದರೆ ಏನು ಎನ್ನುವ ಪ್ರಶ್ನೆ ಹುಟ್ಟಿಸಿತು ಎಂದರು.
