ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಗಂಧದ ಗುಡಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಸಿಎಂ ಬೊಮ್ಮಾಯಿ
ಅಪ್ಪು ಅವರಿಂದ ಸ್ಪೂರ್ತಿಗೆ ಒಳಗಾದ ಯುವ ಸಮುದಾಯದ ನೋಡಿದಾಗ ಸಂತಸವಾಗುತ್ತಿದೆ. ಆದ್ರೇ ಸಣ್ಣ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಹೋಗಿದ್ದಾರೆ. ಅಪ್ಪು ಬಹಳಷ್ಟು ವರ್ಷ ಬದುಕಿ ಬಾಳ ಬೇಕಿತ್ತು.ಈ ನೋವು ಈಗಲೂ ಕಾಡುತ್ತಿದೆ. ಇದೀಗ ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವು ಸಂತಸ ಹಾಗೂ ಹೆಮ್ಮೆ ತಂದಿದೆ. ನವೆಂಬರ್ ಒಂದರಂದು ಅಪ್ಪುಗೆ ಕರ್ನಾಟಕ ರತ್ನ ನೀಡಲಿದ್ದೆವೆ . ಅದು ಎಲ್ಲ ಯುವಕರಿಗೆ ಪ್ರೇರಣೆ ಎಂದು ಭಾವಿಸುತ್ತೇನೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಇದೇ ಅ.28ರಂದು ಗಂಧದ ಗುಡಿ ಸಿನಿಮಾ ತೆರೆಗೆ ಬರ್ತಿದೆ. ಅತ್ತ ದೊಡ್ಮನೆ ಕುಟುಂಬ ಅದ್ದೂರಿಯಾಗಿ ಚಿತ್ರದ ಪ್ರಿಲೀಸ್ ಕಾರ್ಯಕ್ರಮ ಮಾಡುತ್ತಿದ್ದರೆ ಇತ್ತ ಅಭಿಮಾನಿಗಳು ಸಿನಿಮಾ ಬಿಡುಗಡೆಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
