• June 13, 2026

ಅಪ್ಪು ಈಗ ದೇವರಾಗಿದ್ದಾರೆ: ವೇದಿಕೆ ಮೇಲೆ ಭಾವುಕರಾದ ನಟ ಶರತ್ ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಕನಸಿನ ಪ್ರಾಜೆಕ್ಟ್ ಆಗಿದ್ದ ಗಂಧದ ಗುಡಿ ಸಿನಿಮಾ ಇದೇ ಅ.28ರಂದು ತೆರೆಗೆ ಬರುತ್ತಿದೆ. ಅದಕ್ಕೂ ಮುನ್ನ ದೊಡ್ಮನೆ ಕುಟುಂಬ ಚಿತ್ರದ ಪ್ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರ್ಯಕ್ರಮಕ್ಕೆ ಕನ್ನಡದ ಜೊತೆಗೆ ಪರಭಾಷೆಯ ಸ್ಟಾರ್ ಗಳು ಸಾಥ್ ನೀಡಿದ್ರು. ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಖ್ಯಾತ ನಟ ಶರತ್ ಕುಮಾರ್ ಅಪ್ಪು ನೆನೆದು ಭಾವುಕರಾದರು. ಗಂಧದ ಗುಡಿ ಚಿತ್ರದ ಪ್ರಿರಿಲೀಸ್ ಕಾರ್ಯಕ್ರಮಕ್ಕೆ ಪುನೀತ್ ಪರ್ವ ಎಂದು ಹೆಸರಿಡಲಾಗಿತ್ತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಾಕಷ್ಟು ಮಂದಿ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸೌತ್ ನಟ ಶರತ್ ಕುಮಾರ್ ಪುನೀತ್ ರಾಜ್ ಕುಮಾರ್ ಜೊತೆಗಿನ ನೆನಪನ್ನು ಬಿಚ್ಚಿಟ್ಟರು.     ಮೊದಲು ನನಗೆ ಕರೆ ಮಾಡಿ ರಾಜಕುಮಾರ ಚಿತ್ರದಲ್ಲಿ ನಟಿಸುವಂತೆ ಹೇಳಿದ್ದರು. ಈ ಚಿತ್ರದ ಸೆಟ್‌ನಲ್ಲಿ ನಾನು ಹಾಗೂ ಪುನೀತ್ ಮೊದಲು ಭೇಟಿಯಾಗಿದ್ದು. ಈ ಚಿತ್ರ ಬಿಗ್ ಹಿಟ್ ಆಯ್ತು. ಅಪ್ಪು ಮಾನವೀಯ ಗುಣ ಉಳ್ಳವರಾಗಿದ್ದರು. ಸಾಕಷ್ಟು ಸಾಮಾಜಿಕ ಕಾರ್ಯಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದರು ಎಂದರು.     ನಾವು ಪುನೀತ್ ಅವರ ಒಂದು ಫೇಸ್ ನೋಡಿದ್ದೀವಿ. ಆದರೆ ಅವರ ಸಾಕಷ್ಟು ಒಳ್ಳೆಯ ಮುಖಗಳು ಇದೀಗ ನಮಗೆ ತಿಳಿದು ಬಂದಿದೆ. ಅವರು ಯಾವಾಗಲೂ ನಮ್ಮ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅಪ್ಪು ಈಗ ದೇವರಾಗಿದ್ದಾರೆ ಎಂದು ಶರತ್ ಕುಮಾರ್ ಭಾವುಕರಾದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now