• January 1, 2026

ವಿಯೇಟ್ನಾಂನಲ್ಲೂ ಕಮಾಲ್ ಮಾಡಲಿದೆ ಕಾಂತಾರ

ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾ ಭರ್ಜರಿ ಸದ್ದು ಮಾಡುತ್ತಿದೆ. ದೇಶ, ವಿದೇಶದಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಕಾಂತಾರಕ್ಕೆ ಪರಭಾಷೆಯಲ್ಲೂ ಅಭಿಮಾನಿಗಳು ಮನ ಸೋತಿದ್ದಾರೆ. ಇದೀಗ ಹೊರದೇಶದಲ್ಲೂ ಕನ್ನಡಿಗರು ನೆಲೆಸಿದ್ದು, ಅವರಿಗಾಗಿ ವಿಶೇಷ ʻಕಾಂತಾರʼ ಚಿತ್ರದ ಪ್ರದರ್ಶನ ಆಯೋಜಿಸಲು ತಯಾರಿ ನಡೆಸುತ್ತಿದ್ದಾರೆ.     ಕಾಂತಾರ ಸಿನಿಮಾವನ್ನು ನೋಡಿ ಪರಭಾಷೆಯ ಮಂದಿ ಕ್ಲೀನ್ ಬೋಲ್ಡ್ ಆಗಿದ್ದಾರೆ. ಕನ್ನಡದ ಜೊತೆಗೆ ಇತರ ಭಾಷೆಯ ಸ್ಟಾರ್ ಕಲಾವಿದರು ಕಾಂತಾರಕ್ಕೆ ಜೈ ಅಂದಿದ್ದಾರೆ, ಇದೀಗ ಹೊರದೇಶದಲ್ಲಿ ನೆಲೆಸಿರುವ ಕನ್ನಡಿಗರು ಸಿನಿಮಾ ನೋಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ.1ರಂದು ವಿಯೆಟ್ನಾಂನ ಹೋ ಚಿ ಮಿನ್ಹ್ ಸಿಟಿಯಲ್ಲಿ ಪ್ರೇಕ್ಷಕರಿಗೆ ಕಾಂತಾರ ಸಿನಿಮಾದ ಪ್ರದರ್ಶನ ಆಯೋಜಿಸಲಾಗಿದೆ.     ಪರಭಾಷೆಯಲ್ಲೂ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಅಲ್ಲದೆ ಟಾಪ್ 250 ಸಿನಿಮಾಗಳ ಪಟ್ಟಿಯಲ್ಲೂ ಕಾಂತಾರ ಮೊದಲ ಸ್ಥಾನ ಪಡೆದುಕೊಂಡಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now