• January 1, 2026

ಕಾಂತಾರ ಚಿತ್ರದ ಬಳಿಕ ಎಚ್ಚೆತ್ತುಕೊಂಡ ಸರ್ಕಾರ, ದೈವ ನರ್ತನ ಮಾಡುವವರಿಗೆ 2 ಸಾವಿರ ಮಾಶಸನ: ಶಾಸಕ ಸುನೀಲ್ ಕುಮಾರ್ ಘೋಷಣೆ

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರು ಕಾಂತಾರ ಸಿನಿಮಾಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡದಲ್ಲಿ ತೆರೆಕಂಡು ಪರಭಾಷೆಯಲ್ಲೂ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾದ ಬಳಿಕ ಸಾಕಷ್ಟು ಬದಲಾವಣೆಗಳಾಗಿವೆ. ಈ ಮಧ್ಯೆ ಕರಾವಳಿ ಭಾಗದಲ್ಲಿ ದೈವ ನರ್ತನ ಮಾಡುವರಿಗೆ ಕರ್ನಾಟಕ ಸರ್ಕಾರ ದೀಪಾವಳಿ ಹಬ್ಬದ ಸಮಯದಲ್ಲಿ ಶುಭಸುದ್ದಿ ನೀಡಿದೆ. ಮಂಗಳೂರು: ಕರಾವಳಿ ಭಾಗದ ದೈವ, ಭೂತಾರಾಧನೆ ಬಗ್ಗೆ ಕಥೆ ಹೊಂದಿರುವ ಕಾಂತಾರ ಚಿತ್ರ ಎಲ್ಲೆಡೆ ಸದ್ದು ಮಾಡುತ್ತಿರುವ ಮಧ್ಯೆ ಕರಾವಳಿ ಭಾಗದಲ್ಲಿ ದೈವ ನರ್ತನ ಮಾಡುವರಿಗೆ ಕರ್ನಾಟಕ ಸರ್ಕಾರ ದೀಪಾವಳಿ ಹಬ್ಬದ ಸಮಯದಲ್ಲಿ ಶುಭಸುದ್ದಿ ನೀಡಿದೆ. ದೈವ ನರ್ತನ ಮಾಡುವವರಿಗೆ ಸರ್ಕಾರ ಮಾಸಾಶನ ನೀಡಲು ತೀರ್ಮಾನಿಸಿದೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಅಧಿಕೃತ ಘೋಷಣೆ ಮಾಡಿದ್ದು, 60 ವರ್ಷ ಮೇಲ್ಪಟ್ಟ ದೈವನರ್ತನ ಮಾಡುವವರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಮಾಸಾಶನ ಕೊಡಲು ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ.   ಕಾಂತಾರ ಸಿನಿಮಾ ನೋಡಿದ ಸಾಕಷ್ಟು ಮಂದಿ ದೈವ ನರ್ತನ ಮಾಡುವ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಯೋಜನೆಗಳನ್ನು ತರಬೇಕು, ಅವರಿಗಾಗಿ ಮಾಸಾಶನ ನೀಡಬೇಕು ಎಂದು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ತಿಂಗಳಿಗೆ 2 ಸಾವಿರ ಮಾಶಸನ ನೀಡಲು ಮುಂದಾಗಿದೆ.   ಇನ್ನೂ ಕಾಂತಾರ ಸಿನಿಮಾದ ಕುರಿತು ನಟ ಚೇತನ್ ನೀಡಿರುವ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಸುನೀಲ್ ಕುಮಾರ್, ಸಂಸ್ಕೃತಿ ಇಲ್ಲದವರು ಸಂಸ್ಕೃತಿ ಬಗ್ಗೆ ಮಾತಾಡಬಾರದು. ದೈವಾರಾಧನೆ ನಮ್ಮ ತುಳುನಾಡಿನ ಸಾಂಸ್ಕೃತಿಕ ಪ್ರತಿಬಿಂಬ. ಯಾರೋ ಒಬ್ಬ ವ್ಯಕ್ತಿ ಹಾಗೆ ಹೇಳಿದ್ರೆ ಆ ಸಂಸ್ಕೃತಿಯಿಂದ ಯಾರೂ ದೂರ ಆಗಲ್ಲ. ಭೂತಾರಾಧನೆ ಹಿಂದೂ ಸಂಸ್ಕೃತಿಯ ಗಟ್ಟಿಯಾದ ಭಾಗವಾಗಿದೆ ಎಂದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now