• March 16, 2026

ರಿಷಬ್ ಶೆಟ್ಟಿ ಜೊತೆ ಕೂತು ‘ಕಾಂತಾರ’ ನೋಡ್ತಾರಾ ಪ್ರಧಾನಿ ಮೋದಿ?

ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಸದ್ದು ಮಾಡುತ್ತಲೆ ಇದೆ. ಚಿತ್ರ ಬಿಡುಗಡೆ ಆಗಿ ನಾಲ್ಕು ವಾರಗಳಾಗುತ್ತ ಬಂದಿದ್ದರು ಸಾಕಷ್ಟು ಕಡೆಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇದೀಗ ಈ ಸಿನಿಮಾದ ಕುರಿತಾದ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಕಾಂತಾರ ಸಿನಿಮಾಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡದ ಜೊತೆಗೆ ಪರಭಾಷೆಯ ಕಲಾವಿದರು ಕಾಂತಾರ ಸಿನಿಮಾಗೆ ಮನ ಸೋತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗ್ಲೆ ಪರಭಾಷೆಗೆ ಡಬ್ ಆಗಿ ಬಿಡುಗಡೆ ಆಗಿರುವ ಕಾಂತಾರ ಅಲ್ಲೂ ಕಮಾಲ್ ಮಾಡುತ್ತಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ರಿಷಬ್ ಶೆಟ್ಟಿ ಜೊತೆ ಕುಳಿತು ಸಿನಿಮಾ ನೋಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನವೆಂಬರ್ 14ರಂದು ರಿಷಬ್ ಶೆಟ್ಟಿ ಜೊತೆ ಕೂತು ಸಿನಿಮಾ ನೋಡಲಿದ್ದಾರೆ ಎಂಬ ಸುದ್ದಿ ಮೆಮ್ಸ್ ಸೋಷಿಯಲ್ ಮೀಡಯಾದಲ್ಲಿ ವೈರಲ್ ಆಗಿದೆ. ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಇಂಥದೊಂದು ಸುದ್ದಿ ಓಡಾಡುತ್ತಿದೆಯಷ್ಟೇ. ಕಾಂತಾರ ಸ್ಯಾಂಡಲ್ ವುಡ್ ಸಿನಿಮಾ ರಂಗದ ಎಲ್ಲಾ ದಾಖಲೆಗಳನ್ನು ಮುರಿದು ಹಾಕಿದೆ. ಈಗಾಗ್ಲೆ 250 ಸಿನಿಮಾಗಳ ಟಾಪ್ ಲೀಸ್ಟ್ ನಲ್ಲಿ ಮೊದಲ ಸ್ಥಾನದಲ್ಲಿದೆ ಕಾಂತಾರ. ಜೊತೆಗೆ ಈಗಾಗಲೆ 150 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಚಿತ್ರ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಘಳಿಸುವ ಸಾಧ್ಯತೆ ಇದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now