ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಹಳ್ಳಿ ಹುಡುಗಿಯಾಗಿ ಮಿಂಚಿದ ಕೀರ್ತಿ ಸುರೇಶ್: ದಸರಾ ಚಿತ್ರದ ಫಸ್ಟ್ ಲುಕ್ ರಿವೀಲ್
ಮಾಸ್ ಸಿನಿಮಾ ‘ದಸರಾ’ದಲ್ಲಿ ಕೀರ್ತಿ ಸುರೇಶ್ ವೆನ್ನಲ ಪಾತ್ರವನ್ನು ನಟಿಸುತ್ತಿದ್ದಾರೆ. ಪಕ್ಕ ಹಳ್ಳಿ ಹುಡುಗಿಯಾಗಿ ಹಳದಿ ಸೀರೆಯಲ್ಲಿ ಮಿಂಚುತ್ತಿರುವ ಕೀರ್ತಿ ಲುಕ್ ನೋಡಿ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ, ಅಲ್ಲದೆ ಸಿನಿಮಾ ನೋಡಲು ಮತ್ತಷ್ಟು ಕುತೂಹಲದಿಂದ ಕಾಯುವಂತೆ ಮಾಡಿದೆ.
ಈಗಾಗಲೇ ದಸರಾ ಸಿನಿಮಾದ ನಾನಿ ಫಸ್ಟ್ ಲುಕ್ ಹಾಗೂ ಧೂಮ್ ದಾಮ್ ದೊಸ್ತಾನ ಹಾಡು ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ದಸರಾ ಮಾಸ್ ಸಿನಿಮಾ ಇದಾಗಿರೋದ್ರಿಂದ ಸಹಜವಾಗಿಯೇ ಪ್ರೇಕ್ಷಕರಲ್ಲಿ ಕುತೂಹಲ ಕೊಂಚ ಜಾಸ್ತಿಯೇ ಇದೆ. ಶ್ರೀಕಾಂತ್ ಒಡೆಲಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ದಸರಾ ಸಿನಿಮಾ 2023 ಮಾರ್ಚ್ 30ರಂದು ತೆರೆಗೆ ಬರಲಿದೆ.
