ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕಾಂತಾರ ಸಿನಿಮಾ ರಂಗಕ್ಕೆ ಅದ್ಭುತವಾದ ಪಾಠ ಹೇಳಿಕೊಟ್ಟಿದೆ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ
ಅಕ್ಟೋಬರ್ 30ರಂದು ತೆರೆಕಂಡ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾದ ಜೊತೆಗೆ ತೆರೆಕಂಡ ಪೊನ್ನಿಯಲ್ ಸೆಲ್ವನ್ ಹಾಗೂ ಗಾಡ್ ಫಾದರ್ ಚಿತ್ರಗಳನ್ನು ಕಾಂತಾರ ಹಿಂದಿಕ್ಕಿದೆ. ಕನ್ನಡದಲ್ಲಿ ತೆರೆಕಂಡು ಪರಭಾಷೆಗೆ ಡಬ್ ಆಗಿ ಅಲ್ಲಿಯೂ ಕಾಂತಾರ ಕಮಾಲ್ ಮಾಡುತ್ತಿದೆ. ಸದ್ಯ ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ವರ್ಮಾ ಬಿಗ್ ಬಜೆಟ್ ಸಿನಿಮಾಗಳಿಗೆ ತಕ್ಕ ಪಾಠ ಕಲಿಸಿದ್ದಕ್ಕೆ ರಿಷಬ್ ಥ್ಯಾಂಕ್ಸ್, ಎಲ್ಲರೂ ನಿಮಗೆ ಫೀಸ್ ಕಟ್ಟಬೇಕು ಅಂತ ಹೇಳಿದ್ದಾರೆ
ಈ ಬಗ್ಗೆ ಟ್ವೀಟ್ ಮಾಡಿರುವ ಆರ್ ಜಿವಿ ಹೇ ರಿಷಬ್, ಸಿನಿಮಾ ರಂಗಕ್ಕೆ ಕಾಂತಾರ ಎಂಬ ಅದ್ಭುತ ಪಾಠವನ್ನು ಹೇಳಿಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು. ಚಿತ್ರರಂಗದ ಎಲ್ಲರೂ ನಿಮಗೆ ಬೋಧಾನಾ ಶುಲ್ಕ ಕಟ್ಟಬೇಕಾಗುತ್ತದೆ . ನಿಮ್ಮ ಸಿನಿಮಾ ಮೂಲಕ ಶಿವನು ಗುಳಿಗ ದೈವದಿಂದ ಹೇಗೆ ಎಚ್ಚರಗೊಳ್ಳುತ್ತಾನೋ ಹಾಗೆ ಎಲ್ಲಾ ದೊಡ್ಡ ಬಜೆಟ್ ಸಿನಿಮಾ ತಯಾರಕರು ನಡುರಾತ್ರಿ ಹಠಾತ್ತನೆ ಎಚ್ಚರಗೊಳ್ಳುತ್ತಿದ್ದಾರೆ ಎಂದಿದ್ದಾರೆ.
