• March 14, 2026

ನನ್ನನ್ನು ‘ಪ್ಯಾಕೇಜ್ ಸ್ಟಾರ್’ ಎನ್ನುವವರಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ: ನಟ ಪವನ್ ಕಲ್ಯಾಣ್

ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ಜನ ಸೇನಾ ಪಕ್ಷದ ಮುಖ್ಯಸ್ಥ ಪವನ್‌ ಕಲ್ಯಾಣ್‌ ಫುಲ್ ಗರಂ ಆಗಿದ್ದಾರೆ. ವೇದಿಕೆ ಮೇಲೆ ನಿಂತೂ ತಮ್ಮನ್ನು ಪ್ಯಾಕೇಜ್ ಸ್ಟಾರ್ ಎಂದು ಟೀಕಿಸಿದವರಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಗುಂಟೂರಿನಲ್ಲಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದ ಪವನ್ ಕಲ್ಯಾಣ್ ವೇದಿಕೆಯ ಮೇಲೆಯೇ ಕೈಯಲ್ಲಿ ಚಪ್ಪಲಿ ಹಿಡಿದು ನನ್ನನ್ನು ಪ್ಯಾಕೇಜ್ ಸ್ಟಾರ್ ಎಂದು ಅಣುಕಿಸುವವರಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದಿದ್ದಾರೆ. ಪವನ್‌ ಕಲ್ಯಾಣ್‌ ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಪಕ್ಷದೊಂದಿಗೆ ಕೈ ಜೋಡಿಸಿದ್ದಾರೆ ಎಂದು ಇತ್ತೀಚೆಗೆ ಜಗನ್‌ ಮೋಹನ್‌ ರೆಡ್ಡಿ ಆರೋಪಿಸಿದ್ದರು. ಈ ಬಗ್ಗೆ ಪವನ್ ಕಲ್ಯಾಣ್ ಅವರನ್ನು ಪ್ಯಾಕೇಜ್ ಸ್ಟಾರ್ ಎಂದು ಸಾಕಷ್ಟು ಟ್ರೋಲ್ ಮಾಡಲಾಗಿತ್ತು. ಈ ಬಗ್ಗೆ ಕಾರ್ಯಕ್ರಮದಲ್ಲಿ ಆಕ್ರೋಶ ಹೊರ ಹಾಕಿದ ಪವನ್ ಕಲ್ಯಾಣ್,  “ನನ್ನನ್ನು ‘ಪ್ಯಾಕೇಜ್ ಸ್ಟಾರ್’ ಎಂದು ಕರೆಯುವವರಿಗೆ ನನ್ನ ಲೆಫ್ಟ್ ಹ್ಯಾಂಡ್ ರೈಟ್ ಚಪ್ಪಲಿಯಿಂದ ಬಾರಿಸುತ್ತೇನೆ. ಇನ್ನೊಮ್ಮೆ ‘ಪ್ಯಾಕೇಜ್ ಸ್ಟಾರ್’ ಅಂತ ಕರೆಯಿರಿ, ಇದೇ ಚಪ್ಪಲಿಯಿಂದ ನಿಮ್ಮನ್ನು ಹೊಡೆಯುತ್ತೇನೆ ಎಂದು ಚಪ್ಪಲಿಯನ್ನು ಕೈಯಲ್ಲಿ ಎತ್ತಿ ಹಿಡಿದು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now