ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕಿರುತೆರೆ ನಟಿ ವೈಶಾಲಿ ಠಕ್ಕರ್ ಆತ್ಮಹತ್ಯೆ ಪ್ರಕರಣ: ಆರೋಪಿಗಾಗಿ ಬಲೆ ಬೀಸಿದ ಪೊಲೀಸರು
ವೈಶಾಲಿಗೆ ಈ ಹಿಂದೆ ಕೀನ್ಯಾದ ಡೆಂಟಲ್ ಡಾಕ್ಟರ್ ಜೊತೆ ಎಂಗೇಜ್ ಮೆಂಟ್ ಆಗಿತ್ತು. ಈ ವಿಷಯವನ್ನು ವೈಶಾಲಿ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಆದರೆ ಕೆಲವೇ ದಿನಗಳಲ್ಲಿ ಎಂಗೇಜ್ ಮೆಂಟ್ ಮುರಿದು ಬಿದಿದ್ದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಫೋಟೋವನ್ನು ವೈಶಾಲಿ ಡಿಲೀಟ್ ಮಾಡಿದ್ದರು. ಇದೇ ಕಾರಣಕ್ಕೆ ವೈಶಾಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ವೈಶಾಲಿ ಸಾವಿಗೆ ನೆರೆಮನೆಯ ಯುವಕನೇ ಕಾರಣ ಅನ್ನೋದನ್ನು ವೈಶಾಲಿ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ.
ವೈಶಾಲಿಗೆ ತುಂಬಾ ದಿನಗಳಿಂದಲೂ ನೆರೆ ಮನೆಯ ವ್ಯಕ್ತಿಯೊಬ್ಬ ಬಹಳ ಕಿರುಕುಳ ನೀಡುತ್ತಿದ್ದನಂತೆ. ಆತ ದಿನವೂ ಕೊಡುತ್ತಿದ್ದ ಕಿರುಕುಳವೇ ತನ್ನನ್ನು ಸಾಯುವಂತೆ ಪ್ರೇರೇಪಿಸಿತು ಎಂದು ಅವರು ಡೆತ್ ನೋಟ್ ನಲ್ಲಿ ಬರೆದಿದ್ದಾರಂತೆ. ತನ್ನ ಸಾವಿಗೆ ಕಾರಣ, ಅದೇ ನೆರೆಮನೆಯ ವ್ಯಕ್ತಿ ರಾಹುಲ್ ನವ್ಲಾನಿ ಎಂದು ವೈಶಾಲಿ ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ಸದ್ಯ ಪೊಲೀಸರು ಆತನಿಗೆ ತೀವ್ರ ಹುಡುಕಾಟ ನಡೆಸಿದ್ದಾರೆ. ಅತ್ತ ವೈಶಾಲಿ ಆತ್ಮಹತ್ಯೆಯ ವಿಷಯ ತಿಳಿಯುತ್ತಿದ್ದಂತೆ ಇತ್ತ ರಾಹುಲ್ ಮನೆಗೆ ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದಾನೆ.
