• February 10, 2026

ಕಾಂತಾರ ಭರ್ಜರಿ ಕಲೆಕ್ಷನ್: 100 ಕೋಟಿ ಕ್ಲಬ್ ಸೇರಿ ದಾಖಲೆ ಬರೆದ ರಿಷಬ್ ಸಿನಿಮಾ

ಕಾಂತಾರ ಸಿನಿಮಾ ಆರಂಭಿಸಿದಾಗ ಸ್ವತಃ ಚಿತ್ರತಂಡಕ್ಕೆ ಈ ಸಿನಿಮಾ ಈ ಮಟ್ಟಿಗಿನ ಸದ್ದು ಮಾಡುತ್ತದೆ ಎಂಬ ಊಹೆ ಚಿತ್ರತಂಡಕ್ಕೂ ಇರಲಿಲ್ಲ. ಕರಾವಳಿ ಭೂತ ಕೋಲದ ಹಿನ್ನೆಲೆಯಲ್ಲಿ ಮೂಡಿ ಬಂದಿರುವ ಚಿತ್ರವನ್ನ ಇದೀಗ ಪರಭಾಷೆಯ ಮಂದಿಯೂ ಮೆಚ್ಚಿಕೊಂಡಿದ್ದಾರೆ. ಸದ್ಯ ಈ ಸಿನಿಮಾ ನೂರು ಕೋಟಿ ಕ್ಲಬ್ ಸೇರುವ ಮೂಲಕ ದಾಖಲೆ ನಿರ್ಮಿಸಿದೆ. ಹೊಂಬಾಳೆ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಕಾಂತಾರ ಸಿನಿಮಾ ಕಳೆದ ಸೆ.30ರಂದು ತೆರೆಗೆ ಬಂದಿದೆ. ಸಿನಿಮಾ ಬಿಡುಗಡೆ ಆದ ದಿನದಿಂದಲೂ ಚಿತ್ರಮಂದಿರದಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಕಾಂತಾರ ಸಿನಿಮಾವನ್ನು ಪರಭಾಷೆಯ ಮಂದಿಯೂ ಮೆಚ್ಚಿಕೊಂಡಿದ್ದಾರೆ. ಕಾಂತಾರ ಸಿನಿಮಾವನ್ನು ಕನ್ನಡದಲ್ಲೇ ಸಾಕಷ್ಟು ಪರಭಾಷೆಯ ಸ್ಟಾರ್ ಗಳು ನೋಡಿ ಮೆಚ್ಚಿಕೊಂಡಿದ್ದರು. ಅಲ್ಲದೆ ಬೇರೆ ಬೇರೆ ಭಾಷೆಗೂ ಡಬ್ಬಿಂಗ್ ಮಾಡುವಂತೆ ಸಾಕಷ್ಟು ಡಿಮ್ಯಾಂಡ್ ಕ್ರಿಯೇಟ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕಾಂತಾರ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗೂ ಡಬ್ ಆಗಿ ರಿಲೀಸ್ ಆಗಿದ್ದು ಅಲ್ಲೂ ಅತ್ಯುತ್ತಮ ಪ್ರದರ್ಶನ ಕಾಣುತ್ತಿದೆ. ಹಿಂದಿಯಲ್ಲಿ 8 ಕೋಟಿ, ತೆಲುಗಿನಲ್ಲಿ 10 ಕೋಟಿ ಸೇರಿದಂತೆ ಎಲ್ಲಾ ಭಾಷೆಯಲ್ಲೂ ಕೋಟ್ಯಾಂತರ ರೂಪಾಯಿ ಕಲೆಕ್ಷನ್ ಮಾಡಿದೆ. ಕಾಂತಾರ ಚಿತ್ರ ಬಿಡುಗಡೆ ಆದ ಸಂದರ್ಭದಲ್ಲಿಯೇ ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಹಾಗೂ ಚಿರಂಜೀವಿ ನಟನೆಯ ಗಾಡ್ ಫಾದರ್ ಸಿನಿಮಾ ಬಿಡುಗಡೆ ಆಗಿತ್ತು. ಈ ಎರಡು ಸಿನಿಮಾಗಳನ್ನು ಹಿಂದಿಕ್ಕಿ ಕಾಂತಾರ ಸಿನಿಮಾ ಭರ್ಜರಿ ಸದ್ದು ಮಾಡುತ್ತಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now