• March 16, 2026

‘ಗಂಗಾರತಿ’ಯಲ್ಲಿ ಪಾಲ್ಗೊಂಡ ‘ಬನಾರಸ್’ ಜೋಡಿ ಝೈದ್, ಸೋನಾಲ್

ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾ ಬಿಡುಗಡೆಗೆ ಇನ್ನೂ ಕೆಲ ದಿನಗಳು ಮಾತ್ರವೇ ಭಾಕಿ ಇದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದ್ದು ಇದೇ ಕಾರಣಕ್ಕೆ ಭರ್ಜರಿ ಚಿತ್ರದ ಪ್ರಚಾರದಲ್ಲಿ ತೊಡಗಿಕೊಂಡಿದೆ ಬನಾರಸ್ ಸಿನಿಮಾ ತಂಡ. ಸದ್ಯ ಹಿಂದಿ ಪ್ರಬಲವಾಗಿರುವ ಸ್ಥಳಗಳಲ್ಲಿ ಬನಾರಸ್ ತಂಡ ಪ್ರಚಾರದಲ್ಲಿ ತೊಡಗಿಕೊಂಡಿದೆ. ಶಾಸಕ ಜಮೀರ್ ಅಹಮದ್ ಪುತ್ರ ಝೈದ್ ಖಾನ್ ಇದೇ ಮೊದಲ ಭಾರಿಗೆ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದಾರೆ. ಮೊದಲ ಸಿನಿಮಾದಲ್ಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಝೈದ್ ಖಾನ್ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಝೈದ್ ಗೆ ನಟಿ ಸೋನಾಲ್ ಮಾಂತೆರೋ ಕೂಡ ಸಾಥ್ ನೀಡ್ತಿದ್ದಾರೆ. ಜಯತೀರ್ಥ ನಿರ್ದೇಶನದ ಬನಾರಸ್ ಸಿನಿಮಾ ಆರಂಭವಾಗುರುವುದೇ ಗಂಗಾ ನದಿ ತಟದಲ್ಲಿ. ಸದ್ಯ ಚಿತ್ರತಂಡ ಇದೀಗ ಅದೇ ಗಂಗಾ ನದಿ ತಟದಲ್ಲಿ ಕಾಣಿಸಿಕೊಂಡಿದೆ. ಝೈದ್ ಖಾನ್ ಹಾಗೂ ಸೋನಾಲ್ ವಾರಾಣಾಸಿಗೆ ಭೇಟಿ ನೀಡಿದ್ದು ಇದೇ ವೇಳೆ ಗಂಗಾರತಿಯಲ್ಲಿ ಭಾಗಿಯಾಗಿದ್ದಾರೆ. ವಾರಾಣಾಸಿಯಲ್ಲಿ ನಡೆಯುತ್ತಿರುವ ಪ್ರಪ್ರಥಮ ಮಣಿಕರ್ಣಿಕಾ ಫಿಲಂ ಫೆಸ್ಟಿವಲ್‌ನಲ್ಲಿ ಝೈದ್ ಖಾನ್ ಹಾಗೂ ಸೋನಾಲ್ ಭಾಗಿಯಾಗಿದ್ದರು. ಈ ವೇಳೆ ಬನಾರಸ್ ಜೋಡಿಯನ್ನು ಬಾಲಿವುಡ್ ಹಿರಿಯ ನಟ ಸಂಜಯ್ ಮಿಶ್ರಾ ಸನ್ಮಾನ ಮಾಡಿದರು, ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಗಂಗಾರತಿಯಲ್ಲಿ ಪಾಲ್ಗೊಂಡು ಗಂಗಾ ಮಾತೆರೆ ಆಶೀರ್ವಾದ ಪಡೆದರು. ಬಹುನಿರೀಕ್ಷಿತ ಬನಾರಸ್ ಸಿನಿಮಾ ಇದೇ ನವೆಂಬರ್ 4ರಂದು ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಝೈದ್ ಹಾಗೂ ಸೋನಾಲ್ ವಿವಿಧ ದೇವಸ್ಥಾನಗಳಿಗೆ ತೆರೆಳಿ ದೇವರ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now