• June 4, 2026

ಕಾಲಿವುಡ್ ನಟ ವಿಜಯ್ ಆಂಥೋನಿ ಸಾಂಸಾರಿಕ ಜೀವನದಲ್ಲಿ ಬಿರುಕು

ಕಲಾವಿದರ ಬಾಳಲ್ಲಿ ಬ್ರೇಕ್ ಅಪ್ ಅನ್ನೋದು ಕಾಮನ್ ಅನ್ನೋ ಹಾಗಾಗಿದೆ. ಈಗಾಗ್ಲೆ ಸಮಂತ, ನಾಗಚೈತನ್ಯ, ಧನುಷ್, ಐಶ್ವರ್ಯಾ ಬಳಿಕ ಇದೀಗ ಮತ್ತೊಬ್ಬ ತಮಿಳು ನಟನ ದಾಂಪತ್ಯ ಜೀವನ ಅತಂತ್ರವಾಗಿದೆ. ತಮಿಳು ಚಿತ್ರರಗದ ಖ್ಯಾತ ನಟ ವಿಜಯ್ ಆಂಥೋನಿ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ತಮಿಳು ಚಿತ್ರರಂಗದಲ್ಲಿ ಹರಿದಾಡುತ್ತಿದೆ. ಪ್ಲೇ ಬ್ಯಾಕ್ ಸಿಂಗರ್, ಫಿಲ್ಮ್ ಎಡಿಟರ್, ಆಡಿಯೋ ಇಂಜಿನಿಯರ್, ಫಿಲ್ಮ್ ಮೇಕರ್, ಆ್ಯಕ್ಟರ್ ಹೀಗೆ ವಿವಿಧ ರಂಗದಲ್ಲಿ ಗುರುತಿಸಿಕೊಂಡಿರುವ ವಿಜಯ್ ಆಂಥೋನಿ ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಖ್ಯಾತಿ ಘಳಿಸಿದ್ದಾರೆ. 2005ರಲ್ಲಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಮ್ಯಾಸಿಕ್ ಕಂಪೋಸರ್ ಆಗಿ ಗುರುತಿಸಿಕೊಂಡ ವಿಜಯ್ ಆಂಥೋನಿ 2012ರಲ್ಲಿ ತೆರೆಕಂಡ ನಾನ್ ಸಿನಿಮಾದ ಮೂಲಕ ನಟನ ಜರ್ನಿ ಆರಂಭಿಸಿದರು. 2006ರಲ್ಲಿ ನಿರ್ಮಾಪಕಿ ಫಾತಿಮಾ ಕೈ ಹಿಡಿದ ವಿಜಯ್ ಆಂಥೋನಿ 16 ವರ್ಷದ ಸಾಂಸಾರಿಕ ಜೀವನದಲ್ಲಿ ಬಿರುಕು ಮೂಡಲಿದೆಯಂತೆ. ಇತ್ತೀಚೆಗೆ ಮದುವೆಯ ಬಗ್ಗೆ ಟ್ವೀಟ್ ಮಾಡಿರುವ ವಿಜಯ್ ಆಂಥೋನಿ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದಾರೆ. ಅಲ್ಲದೆ ವಿಜಯ್ ಆಂಥೋನಿ ಪತ್ನಿ ಫಾತಿಮಾಗೆ ಡಿವೋರ್ಸ್ ನೀಡುವು ಸುಳಿವು ನೀಡಿದ್ದಾರೆ ಎನ್ನಲಾಗುತ್ತಿದೆ. ನಿಮ್ಮ ಕುಟುಂಬದಲ್ಲಿ ಏನೇ ಸಮಸ್ಯೆ ಇದ್ದರೂ, ಅದನ್ನು ನಿಮ್ಮಗಳ ನಡುವೆ ಪರಿಹಾರ ಮಾಡಿಕೊಳ್ಳಿ. ಅದು ಸಾಧ್ಯವಿಲ್ಲ ಅಂದರೆ ಬೇರೆಯಾಗಿ. ಇಬ್ಬರೂ ಕಾಲಿಗೆ ಬೀಳುವ ಮೂಲಕ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸಿ. ಆದರೆ, ಮೂರನೇ ವ್ಯಕ್ತಿಯನ್ನು ನಿಮ್ಮ ಜೀವನದೊಳಗೆ ಪ್ರವೇಶ ಮಾಡಲು ಬಿಡಬೇಡಿ. ಆವರು ನಿಮ್ಮನ್ನು ಮುಗಿಸಿಬಿಡುತ್ತಾರೆ ಎಂದು ವಿಜಯ್ ಆಂಥೋನಿ ಟ್ವೀಟ್ ಮಾಡಿದ್ದಾರೆ. ಇದೀಗ ಈ ಟ್ವೀಟ್‌ನಿಂದ ನಟ ವಿಜಯ್ ತಮ್ಮ ಪತ್ನಿಗೆ ಡಿವೋರ್ಸ್ ಕೊಡಲಿದ್ದಾರೆ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now