• January 1, 2026

 ನಟಿ ದಿವ್ಯಾ ಶ್ರೀಧರ್ ಪತಿ ಅಮ್ಜಾದ್ ಖಾನ್ ಬಂಧನ

ಆಕಾಶ ದೀಪ ಧಾರವಾಹಿ ಮೂಲಕ ಖ್ಯಾತಿ ಘಳಿಸಿದ ಕಿರುತೆರೆ ನಟಿ ದಿವ್ಯಾ ಶ್ರೀಧರ್ ಅವರ ಪತಿ ಅಮ್ಜಾದ್ ಖಾನ್ ರನ್ನು ತಮಿಳು ನಾಡು ಪೊಲೀಸರು ಬಂಧಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಅಮ್ಜಾದ್ ಖಾನ್ ತನಗೆ ಸುಳ್ಳು ಹೇಳಿ ಮೋಸ ಮಾಡಿ ಮದುವೆ ಆಗಿದ್ದಾನೆ. ಅಲ್ಲದೆ ತಾನು ಗರ್ಭೀಣಿ ಎಂಬುದನ್ನು ಲೆಕ್ಕಿಸದೆ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ದಿವ್ಯಾ ಶ್ರೀಧರ್ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಇದೀಗ ಅಮ್ಜಾದ್ ಖಾನ್ ರನ್ನು ಬಂಧಿಸಲಾಗಿದೆ. ಸ್ಯಾಂಡಲ್ ವುಡ್ ಸಿನಿಮಾ ರಂಗದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ದಿವ್ಯಾ ಶ್ರೀಧರ್ ಗೆ ಖ್ಯಾತಿ ತಂದುಕೊಟ್ಟಿದ್ದು ಆಕಾಶ ದೀಪ ಧಾರವಾಹಿ. ಬಳಿಕ ದಿವ್ಯಾ ತಮಿಳು ಕಿರುತೆರೆಗೂ ಎಂಟ್ರಿಕೊಟ್ಟಿದ್ದು ಈ ವೇಳೆ ಸಹನಟ ಅನರ್ವ ಅಲಿಯಾಸ್ ಅಮ್ಜಾದ್ ಖಾನ್ ರನ್ನು ಪ್ರೀತಿಸಿ ಮದುವೆಯಾಗಿದ್ದರು. 2017ರಿಂದ ಲೀವಿಂಗ್ ಡುಗೇದರ್ ನಲ್ಲಿದ್ದ ಜೋಡಿಗಳು ಕಳೆದ ಜೂನ್ ತಿಂಗಳಲ್ಲಿ ಹಸೆಮಣೆ ಏರಿದ್ದರು. ಸದ್ಯ ದಿವ್ಯಾ ಮೂರು ತಿಂಗಳ ಗರ್ಭಿಣಿಯಾಗಿದ್ದು ಇದೇ ವೇಳೆ ಅಮ್ಜದ್ ದಿವ್ಯಾರಿಂದ ದೂರವಾಗಲು ನಿರ್ಧರಿಸಿದ್ದಾರೆ. ಈ ವೇಳೆ ಆಕೆಯ ಮೇಲೆ ಹಲ್ಲೆ ನಡೆಸಿದ್ದು, ತನಗೆ ಮೋಸ ಮಾಡಿ ಮದುವೆಯಾಗಿದ್ದಾನೆ ಎಂದು ದಿವ್ಯಾ ಆರೋಪಿಸಿದ್ದರು. ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದು ದಿವ್ಯಾ ಬಳಿಕ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿ ಅಮ್ಜಾದ್ ಮನೆಗೆ ಹೋಗಿದ್ದರು. ಈ ವೇಳೆ ದಿವ್ಯಾ ಶ್ರೀಧರ್, ತನಗೆ ಈ ರೀತಿ ಯಾಕೆ ಮೋಸ ಮಾಡಿದೆ ಎಂದು ಪ್ರಶ್ನಿಸಿದ್ದರು. ಪತಿ ಜೊತೆ ಜೋರು ಮಾತಿಗೆ ನಿಂತಿದ್ದರು. ದಿವ್ಯಾ ಶ್ರೀಧರ್ ಕೂಗಾಡುತ್ತಿರುವ ವಿಡಿಯೋವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿರುವ ಅಮ್ಜಾದ್ ಖಾನ್ ಅದನ್ನು ಮಾಧ್ಯಮಗಳಿಗೆ ನೀಡಿದ್ದರು. ‘ಮೋಸ ಮಾಡಿದ್ದು ನಾನಲ್ಲ, ನೀನು. ನೀನೇ ನನ್ನನ್ನು ಪ್ರೀತಿಸಿ ಮದುವೆ ಆಗಿದ್ದು. ನಾನು ಮೋಸ ಮಾಡಿಲ್ಲ. ನೀನೇ ನನಗೆ ಮೋಸ ಮಾಡುತ್ತಿರುವದು’ ಎಂದು ಅಮ್ಜಾದ್ ಖಾನ್ ಆರೋಪಿಸಿದ್ದಾರೆ. ಒಬ್ಬರನ್ನೊಬ್ಬರು ಆರೋಪ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇದೀಗ ಅಮ್ಜದ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now