ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಗಂಧದ ಗುಡಿ ಪ್ರೀರಿಲೀಸ್ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ ದಕ್ಷಿಣದ ಸ್ಟಾರ್ಸ್
ಅಪ್ಪು ನಟನೆಯ ಕೊನೆಯ ಕನಸಿನ ಸಿನಿಮಾ `ಗಂಧದ ಗುಡಿ’ಗೆ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಇಡೀ ಅಣ್ಣಾವ್ರ ಕುಟುಂಬ ಕೈ ಜೋಡಿಸಿದೆ. ಈ ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲು ಸಕಲ ತಯಾರಿ ನಡೆಯುತ್ತಿದ್ದು ಪುನೀತ್ ರಾಜ್ ಕುಮಾರ್ ಕುಟುಂಬದ ಜೊತೆಗೆ ಅಭಿಮಾನಿಗಳು ಕೂಡ ತಯಾರಿ ನಡೆಸ್ತಿದ್ದಾರೆ.
ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ನಲ್ಲಿ ಗಂಧದ ಗುಡಿ ಸಿನಿಮಾದ ಪ್ರೀರಿಲೀಸ್ ಕಾರ್ಯಕ್ರಮ ಇದೇ ಅಕ್ಟೋಬರ್ 21ರಂದು ನಡೆಯಲಿದೆ. ಚಿತ್ರದ ಪ್ರೀ -ರಿಲೀಸ್ ಕಾರ್ಯಕ್ರಮಕ್ಕೆ ಕರ್ನಾಟಕದ ಮೂಲೆ ಮೂಲೆಯಿಂದ ಪುನೀತ್ ಫ್ಯಾನ್ಸ್ ಬರ್ತಿದ್ದಾರೆ. ಇನ್ನೂ ಈಗಾಗ್ಲೆ ದೊಡ್ಮನೆ ಕುಟುಂಬ ಪರಭಾಷೆಯ ಸ್ಟಾರ್ಸ್ ಕಲಾವಿದರಿಗೂ ಆಹ್ವಾನ ನೀಡಿದೆ. ಗಂಧದ ಗುಡಿ ಪ್ರೀರಿಲೀಸ್ ಕಾರ್ಯಕ್ರಮಕ್ಕೆ ಸೌತ್ ಸೂಪರ್ ಸ್ಟಾರ್ಸ್ ಗಳು ಆಗಮಿಸುವ ಮೂಲಕ ಕಾರ್ಯಕ್ರಮದ ಮೆರುಗು ಮತ್ತಷ್ಟು ಹೆಚ್ಚಲಿದೆ.
ಸ್ಟಾರ್ ನಟರಾದ ನಂದ ಮೂರಿ ಬಾಲಕೃಷ್ಣ, ಕಮಲ್ ಹಾಸನ್, ಸೂರ್ಯ, ರಾಣ ದಗ್ಗುಭಾಟಿ, ಜೂನಿಯರ್ ಎನ್ ಟಿ ಆರ್ ಸೇರಿದಂತೆ ಇನ್ನೂ ಸಾಕಷ್ಟು ಮಂದಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಅಕ್ಟೋಬರ್ 21ರಂದು ಸಂಜೆ 6.30ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು ಸುಮಾರು 5 ಲಕ್ಷಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆ ಇದೆ.
