• March 15, 2026

ಕೊಟ್ಟ ಮಾತಿಗೆ ತಪ್ಪದ ಹ್ಯಾಟ್ರಿಕ್ ಹೀರೋ: ಶಿವರಾಜ್ ಕುಮಾರ್ ಚಿತ್ರದಲ್ಲಿ ಅಭಿಜಿತ್ ನಟನೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಸ್ಯಾಂಡಲ್ ವುಡ್ ಜೊತೆಗೆ ಪರಭಾಷೆಯಲ್ಲೂ ಸಾಕಷ್ಟು ಹೆಸರಿದೆ. ಸಿನಿ ರಂಗದಲ್ಲಿ ದೊಡ್ಡ ಮಟ್ಟದ ಖ್ಯಾತಿ ಘಳಿಸಿರುವ ಶಿವಣ್ಣ ಡೌನ್ ಟು ಅರ್ಥ್ ಅನ್ನೋದು ಎಲ್ರಿಗೂ ಗೊತ್ತಿರೋ ವಿಚಾರ. ಜೊತೆಗೆ ಶಿವರಾಜ್ ಕುಮಾರ್ ಕೊಟ್ಟ ಮಾತಿಗೆ ಎಂದು ತಪ್ಪಲ್ಲಾ ಅನ್ನೊದು ಮತ್ತೊಮ್ಮೆ ಪ್ರೂವ್ ಆಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸೆಂಚುರಿ ಸ್ಟಾರ್ ಸದ್ಯ ತಮಿಳು ಚಿತ್ರರಂಗದಲ್ಲೂ ಸದ್ದು ಮಾಡ್ತಿದ್ದಾರೆ. ಇದರ ಜೊತೆಗೆ ರಿಯಾಲಿಟಿ ಶೋ ಜಡ್ಜ್ ಕೂಡ ಆಗಿದ್ದಾರೆ. ಇದೀಗ ರಿಯಾಲಿಟಿ ಶೋ ಒಂದರಲ್ಲಿ ನೀಡಿದ್ದ ಮಾತನ್ನು ಶಿವಣ್ಣ ಉಳಿಸಿಕೊಂಡಿದ್ದಾರೆ. ಶಿವರಾಜ್ ಕುಮಾರ್ ಇತ್ತೀಚಿಗೆ ಡ್ಯಾನ್ಸ್ ರಿಯಾಲಿಟಿ ಶೋ ಡಿಕೆಡಿಯ ನಿರ್ಣಾಯಕರು ಆಗಿದ್ದರು. ಅದೇ ರೀತಿ ಇನ್ನೊಂದು ಕಡೆ ಜೋಡಿ ನಂಬರ್ ಒನ್ ವಿಶೇಷ ಶೋ ಕೂಡ ಆಯೋಜಿಸಲಾಗಿತ್ತು. ಈ ಎರಡೂ ಶೋಗಳ ಮಹಾಸಂಗಮದಲ್ಲಿ ಶಿವಣ್ಣ ಮಾತೊಂದನ್ನು ನೀಡಿದ್ದು ಇದೀಗ ಆ ಮಾತನ್ನು ಉಳಿಸಿಕೊಂಡಿದ್ದಾರೆ. ಜೋಡಿ ನಂಬರ್ ವನ್ ಶೋನಲ್ಲಿ ನಟ ಅಭಿಜಿತ್ ಪತ್ನಿಯೊಂದಿಗೆ ಭಾಗವಹಿಸಿದ್ದರು. ಈ ವೇಳೆ “ನನ್ನ ಮುಂದಿನ ಸಿನಿಮಾದಲ್ಲಿ ನೀವೂ ಇರುತ್ತೀರಿ” ಎಂದಿದ್ದರು. ಇದೀಗ ಶಿವಣ್ಣ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದು, ತಮ್ಮ ಮುಂದಿನ ಸಿನಿಮಾ ಘೋಸ್ಟ್  ಚಿತ್ರದಲ್ಲಿ ಅಭಿಜಿತ್ ಗೆ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಶಿವರಾಜ್ ಕುಮಾರ್ ನಟನೆಯ ಸಂದೇಶ್ ನಾಗರಾಜ್ ಪ್ರೊಡಕ್ಷನ್ ಹೌಸ್ ನಲ್ಲಿ ನಿರ್ಮಾಣವಾಗುತ್ತಿರುವ, ಶ್ರೀನಿ ನಿರ್ದೇಶನದ ಘೋಸ್ಟ್ ಸಿನಿಮಾ ಸೆಟ್ಟೇರಿದೆ. ಈ ಸಿನಿಮಾದ ವಿಶೇಷ ಪಾತ್ರದಲ್ಲಿ ಅಭಿಜಿತ್ ನಟಿಸುತ್ತಿದ್ದಾರೆ. ಸಾಕಷ್ಟು ಸಮುದಿಂದ ಸಿನಿಮಾ ರಂಗದಿಂದ ದೂರವಿದ್ದ ಅಭಿಜಿತ್ ಇದೀಗ ಒಂದೊಳ್ಳೆ ಪಾತ್ರದ ಮೂಲಕ ಮತ್ತೆ ಗಾಂಧಿನಗರಕ್ಕೆ ಎಂಟ್ರಿಕೊಡ್ತಿದ್ದಾರೆ. ಘೋಸ್ಟ್ ಮಾತ್ರವಲ್ಲ ಇದರ ಜೊತೆಗೆ ಇನ್ನೂ ಎರಡು ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಶಿವಣ್ಣ ಅಭಿಜಿತ್ ಗೆ ಒದಗಿಸಿಕೊಟ್ಟಿದ್ದಾರೆ. ಈ ಮೂಲಕ ಶಿವರಾಜ್ ಕುಮಾರ್ ಕೊಟ್ಟ ಮಾತನ್ನು ಉಳಿಸಿಕೊಟ್ಟಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now