• June 20, 2026

ಅ.16ರಂದು ದಾವಣಗೆರೆಯಲ್ಲಿ ಹೆಟ್ ಬುಷ್ ಪ್ರೀರಿಲೀಸ್: ರಮ್ಯಾ, ರಚಿತಾ ರಾಮ್ ಆಗಮನ

ಬೆಂಗಳೂರಿನ ಭೂಗತ ಲೋಕದ ಕಥೆ ಹೊಂದಿರುವ ಹೆಡ್ ಬುಷ್ ಸಿನಿಮಾ ಬಿಡುಗಡೆಗೆ ಇನ್ನೂ ಕೆಲ ದಿನಗಳ ಮಾತ್ರವೇ ಭಾಕಿ ಇದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಇದೀಗ ಹೆಡ್ ಬುಷ್ ತಂಡ ಅ.16ರಂದು ದಾವಣಗೆರೆಯಲ್ಲಿ ಅದ್ದೂರಿ ಪ್ರೀ ರಿಲೀಸ್ ಈವೆಂಟ್ ಹಮ್ಮಿಕೊಂಡಿದ್ದು ಸಾಕಷ್ಟು ನಟ, ನಟಿಯರು ಈವೆಂಟ್ ನಲ್ಲಿ ಭಾಗಿಯಾಗಲಿದ್ದಾರೆ. ದಾವಣಗೆರೆಯ ಎಂಬಿಎ ಗ್ರೌಂಡ್ ನಲ್ಲಿ ಸಂಜೆ 5.30ಕ್ಕೆ ಹೆಡ್ ಬುಷ್ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಲಿದ್ದು ನಟಿಯರಾದ ರಮ್ಯಾ, ರಚಿತಾ ರಾಮ್, ಸತೀಶ್ ನೀನಾಸಂ ಸೇರಿದಂತೆ ಸಾಕಷ್ಟು ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟಿ ರಮ್ಯಾ ಹೆಡ್ ಬುಷ್ ಪ್ರೀ ರಿಲೀಸ್ ಕಾರ್ಯಕ್ರಮಕ್ಕಾಗಿ ದಾವಣಗೆರೆಗೆ ಬರುತ್ತಿದ್ದು ಅಲ್ಲೇ ಸಿಗೋಣ್ವಾ ಎಂದು ಬರೆದುಕೊಂಡಿದ್ದಾರೆ. ನಟ ಡಾಲಿ ಧನಂಜಯ್ ಹೆಡ್ ಬುಷ್ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ನಿರ್ಮಾಣದ ಜವಬ್ದಾರಿಯನ್ನು ಹೊತ್ತಿದ್ದಾರೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ಪ್ರಚಾರ ಕಾರ್ಯ ನಡೆಸಿ ಸಿನಿಮಾವನ್ನು ಆದಷ್ಟು ಜನರಿಗೆ ತಲುಪಿಸಲು ಮುಂದಾಗಿದ್ದಾರೆ. ಹೆಡ್ ಬುಷ್ ರೆಟ್ರೋ ಕಾಲದ ಕಥೆಯುಳ್ಳ ಚಿತ್ರವಾಗಿದ್ದು ಇದೇ ಕಾರಣಕ್ಕೆ ಇತ್ತೀಚೆಗೆ ಚಿತ್ರತಂಡ ರೆಟ್ರೋ ಸ್ಟೈಲ್ ನಲ್ಲೇ ಸೈಕಲ್ ಏರಿ ಸಿನಿಮಾದ ಪ್ರಚಾರ ನಡೆಸಿದ್ದರು. ಹೆಡ್ ಬುಷ್ ಸಿನಿಮಾ ಅ.21ರಂದು ತೆರೆಗೆ ಬರಲಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now