• March 14, 2026

‘ಕಾಂತಾರ’ ಹಿಂದಿ ರಿಲೀಸ್ ಗೆ ಕೌಂಟ್ ಡೌನ್: 2500 ಸ್ಕ್ರೀನ್ ಗಳಲ್ಲಿ ರಿಷಬ್ ಶೆಟ್ಟಿ ಅಬ್ಬರ

ಸದ್ಯ ಎಲ್ಲಿ ನೋಡಿದ್ರು ಕಾಂತಾರ ಸಿನಿಮಾದ್ದೇ ಹವಾ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಚಿತ್ರಕ್ಕೆ ಪ್ರೇಕ್ಷಕರು ಕ್ಲೀನ್ ಬೋಲ್ಡ್ ಆಗಿದ್ದು ಪರಭಾಷೆಯ ಮಂದಿಯೂ ಕಾಂತಾರ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಉಳಿದ ಭಾಷೆಗಳಲ್ಲೂ ಕಾಂತಾರ ಬಿಡುಗಡೆಗೆ ಪ್ಲಾನ್ ನಡೆಯುತ್ತಿದೆ. ಕಾಂತಾರ ಸಿನಿಮಾ ಬಿಡುಗಡೆ ಆಗಿ ಎರಡು ವಾರ ಕಳೆದಿದೆ. ಆದರೆ ಇಂದಿಗೂ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು ಸ್ಟಾರ್ ನಟರೇ ರಿಷಬ್ ನಟನೆಯನ್ನು ಮೆಚ್ಚಿ ಹಾಡಿ ಹೊಗಳುತ್ತಿದ್ದಾರೆ. ಈ ಮಧ್ಯೆ ಕಾಂತಾರ ಸಿನಿಮಾ ಹಿಂದಿಯಲ್ಲಿ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ. ಇದೇ ಅ.14ರಂದು ಶುಕ್ರವಾರ ಕಾಂತಾರ ಹಿಂದಿಯಲ್ಲಿ ತೆರೆಗೆ ಬರಲಿದೆ. ಬರೋಬ್ಬರಿ 2500 ಪರದೆಗಳಲ್ಲಿ  ಕಾಂತಾರ ಹಿಂದಿಗೆ ಡಬ್ ಆಗಿ ಬಿಡುಗಡೆ ಆಗುತ್ತಿದೆ. ಸೆಪ್ಟೆಂಬರ್ 30ರಂದು ಬಿಡುಗಡೆ ಆದ ಕಾಂತಾರ ಸಿನಿಮಾವನ್ನು ಕನ್ನಡ ವರ್ಷನ್ ನಲ್ಲಿನೋಡಿ ಪರಭಾಷೆಯ ಮಂದಿಯೂ ಮೆಚ್ಚಿಕೊಂಡಿದ್ದರು. ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಡಬ್ಬಿಂಗ್ ಗೆ ಸಾಕಷ್ಟು ಡಿಮ್ಯಾಂಡ್ ಕ್ರಿಯೇಟ್ ಆಗಿತ್ತು. ಇದೀಗ ಹಿಂದಿಗೆ ಡಬ್ ಆಗಿದ್ದು ಬಿಡುಗಡೆಗೆ ಇನ್ನೂ ಎರಡೇ ಎರಡು ದಿನ ಮಾತ್ರವೇ ಭಾಕಿ ಇದೆ. ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ‘ಕೆ.ಜಿ.ಎಫ್ 2’ ಚಿತ್ರವನ್ನು ಬಾಲಿವುಡ್ ನಲ್ಲಿ ದಾಖಲೆ ಮಟ್ಟದ ಬಿಡುಗಡೆ ಮಾಡಲಾಗಿತ್ತು. ಇದೀಗ ಮತ್ತೆ ಕಾಂತಾರ ಚಿತ್ರವನ್ನು ಅಧಿಕ ಸಂಖ್ಯೆಯ ಚಿತ್ರಮಂದಿಗಳಲ್ಲಿ ಬಿಡುಗಡೆ ಮಾಡುವ ಮೂಲಕ ಮತ್ತೆ ಹೊಂಬಾಳೆ ಬ್ಯಾನರ್ ಸದ್ದು ಮಾಡುತ್ತಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now