• June 20, 2026

ಏಕಾಏಕಿ ಟ್ವಿಟರ್ ಗೆ ವಿದಾಯ ಹೇಳಿದ ಕರಣ್ ಜೋಹರ್

ಈಗೇನಿದ್ರು ಸೋಷಿಯಲ್ ಮೀಡಿಯಾ ಯುಗ. ಅದರಲ್ಲೂ ಸೆಲೆಬ್ರಿಟಿಗಳು ಸಾಮಾಜಿಕ ಜಾಲಾ ತಾಣದಲ್ಲಿ ಸದಾ ಸಖತ್ ಆಕ್ಟೀವ್ ಆಗಿರ್ತಾರೆ. ಸಿನಿಮಾ, ಪರ್ಸನಲ್ ಲೈಫ್ ಹೀಗೆ ಪ್ರತಿಯೊಂದು ವಿಷಯಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಜನರಿಗೆ ತಲುಪಿಸುತ್ತಾರೆ. ಆದ್ರೆ ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಿದ್ದ ಖ್ಯಾತ ನಿರ್ದೇಶನ ಹಾಗೂ ನಿರ್ಮಾಪಕ ಕರಣ್ ಜೋಹರ್ ನಿನ್ನೆ ಇದ್ದಕ್ಕಿದ್ದ ಹಾಗೆ ಟ್ವೀಟರ್ ಖಾತೆಗೆ ವಿದಾಯ ಹೇಳಿದ್ದಾರೆ. ಏಕಾಏಕಿ ಸೋಷಿಯಲ್ ಮೀಡಿಯಾ ಖಾತೆಯಿಂದ ಹೊರ ನಡೆದಿರುವ ಕರಣ್ ಜೋಹರ್ ನಡೆಯ ಕುರಿತು ಸಾಕಷ್ಟು ಚರ್ಚೆ ಶುರುವಾಗಿದೆ. ಈ ಬಗ್ಗೆ ಟ್ವೀಟ್ ನಲ್ಲಿ ತಿಳಿಸಿರುವ ಕರಣ್ ಜೋಹರ್ ಪಾಸಿಟಿವ್​ ಶಕ್ತಿಗಳಿಗೆ ಜಾಗ ಮಾಡಿಕೊಡುವ ಸಲುವಾಗಿ ಮೊದಲ ಹೆಜ್ಜೆ ಇಟ್ಟಿದ್ದೇನೆ. ಟ್ವಿಟರ್​ಗೆ ವಿದಾಯ’ ಎಂದು ಬರೆದುಕೊಂಡಿದ್ದಾರೆ.   ಬಾಲಿವುಡ್ ಚಿತ್ರರಂಗದಲ್ಲಿ ಕರಣ್ ಜೋಹರ್ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಾಕಷ್ಟು ನಟ, ನಟಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಕರಣ್ ಜೋಹರ್ ಅವರದ್ದು. ಸ್ಟಾರ್ ಕಿಡ್ ಗಳನ್ನು ಲಾಂಚ್ ಮಾಡುವುದರಲ್ಲಿ ಕರಣ್ ಜೋಹರ್ ಸದಾ ಮುಂದು. ಕರಣ್ ಜೋಹರ್ ರ ಒಂದೇ ಒಂದು ಟ್ವೀಟ್ ಗೆ ಲಕ್ಷಾಂತರ ಅಭಿಮಾನಿಗಳು ಕಾಯುತ್ತಿರುತ್ತಾರೆ. ಆದರೆ ಇದೀಗ ಏಕಾ ಏಕಿ ಕರಣ್ ಟ್ವಿಟರ್ ಗೆ ವಿದಾಯ ಹೇಳಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇತ್ತೀಚೆಗೆ ಕರಣ್ ಜೋಹರ್ ನಿರ್ಮಾಣದ ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಸಿನಿಮಾದ ಕಲೆಕ್ಷನ್ ಕುರಿತಾಗಿ ಸಾಕಷ್ಟು ಚರ್ಚೆಗಳು ಶುರುವಾಗಿತ್ತು. ಇದು ಕರಣ್​ ಜೋಹರ್ ಗೆ ಸಾಕಷ್ಟು ನೋವುಂಟು ಮಾಡಿತ್ತು. ಅಲ್ಲದೆ ‘ನಾವು ವಿಮರ್ಶೆಯನ್ನು ಸ್ವೀಕರಿಸಲು ರೆಡಿ ಇದ್ದೇನೆ. ಆದರೆ ನೆಗೆಟಿವಿಟಿ ಸ್ವೀಕರಿಸುವುದು ಕಷ್ಟ’ ಎಂದು ಕರಣ್ ಹೇಳಿದ್ದರು. ಆ ಬೆನ್ನಲ್ಲೇ ಕರಣ್ ಜೋಹರ್ ಟ್ವಿಟರ್​ನಿಂದ ಹೊರನಡೆದಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now