ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮೋಹಕ ತಾರೆ ರಮ್ಯಾ ಮದುವೆಯಾಗೋ ಹುಡುಗ ಹೇಗಿರಬೇಕಂತೆ ಗೊತ್ತಾ?
ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ನಿರೂಪಕ ಅಕುಲ್ ಬಾಲಾಜಿ, ರಮ್ಯಾ ಅವರಿಗೆ ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ರಮ್ಯಾ, ನಾನು ಸಿಂಗಲ್ ಆಗಿದ್ದೇನೆ, ಆತ ಕೂಡ ಸಿಂಗಲ್ ಆಗಿರಬೇಕು. ಆತನಿಗೆ ಮದುವೆ ಆಗಿರಬಾರದು. ಹುಡುಗನ ಲುಕ್ಸ್ ಬಗ್ಗೆ ನಾನು ಯೋಚನೆ ಮಾಡುವುದಿಲ್ಲ. ಅವರು ಒಳ್ಳೆಯ ಮನುಷ್ಯನಾಗಿರಬೇಕು. ಅವನಲ್ಲಿ ಕರುಣೆಯ ಗುಣ ಹೆಚ್ಚಿಗೆ ಇರಬೇಕು ಎಂದು ರಮ್ಯಾ ಹೇಳಿದ್ದಾರೆ.
ಸಾಕಷ್ಟು ವರ್ಷಗಳ ಬಳಿಕ ರಮ್ಯಾ ಮತ್ತೆ ತೆರೆ ಮೇಲೆ ಕಮಾಲ್ ಮಾಡಲಿದ್ದಾರೆ. ರಮ್ಯಾರನ್ನು ಮತ್ತೆ ತೆರೆ ಮೇಲೆ ನೋಡೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ರಾಜ್ ಬಿ ಶೆಟ್ಟಿ ಜೊತೆ ಸೇರಿ ರಮ್ಯಾ ಒಂದೊಳ್ಳೆ ಕಥೆಯ ಮೂಲಕ ಸಿಲ್ವರ್ ಸ್ಕ್ರೀನ್ ಮೇಲೆ ಸದ್ದು ಮಾಡಲಿದ್ದಾರೆ.
