ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆಯಾಗಿದ್ದ ‘ಚೆಲ್ಲೋ ಶೋ’ ಚಿತ್ರದ ನಟ ರಾಹುಲ್ ಕೊಲಿ ನಿಧನ
ಮೂಲಗಳ ಪ್ರಕಾರ ಅಕ್ಟೋಬರ್ 2ರಂದು ರಾಹುಲ್ ಕೊಲಿ ರಕ್ತ ವಾಂತಿ ಮಾಡಿಕೊಂಡಿದ್ದಾನೆ. ಅಲ್ಲದೆ ಈ ವೇಳೆ ಆತನಿಗೆ ಜ್ವರ ಕೂಡ ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾಹುಲ್ ಕೊಲಿ ನಿಧನರಾಗಿದ್ದಾರೆ. ರಾಹುಲ್ ಕೊಲಿ ಲ್ಯುಕೇಮಿಯಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಚೆಲ್ಲೋ ಶೋ ಸಿನಿಮಾ ಬಿಡುಗಡೆ ಆದ ಬಳಿಕ ತಮ್ಮ ಜೀವನ ಸ್ಥಿತಿ ಸುಧಾರಿಸುತ್ತದೆ ಎಂದು ತಂದೆಗೆ ಬಾಲಕ ರಾಹುಲ್ ಹೇಳಿದ್ದ. ಆದರೆ ಸಿನಿಮಾ ಬಿಡುಗಡೆಗೂ ಮುನ್ನವೇ ರಾಹುಲ್ ನಿಧನರಾಗಿದ್ದು ಮಗನನ್ನು ಕಳೆದುಕೊಂಡು ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಮಗನನ್ನು ಕಳೆದುಕೊಂಡ ನೋವಿನಲ್ಲೇ ರಾಹುಲ್ ಕೊಲಿ ಕುಟುಂಬದವರು ಅ.14ರಂದು ‘ಚೆಲ್ಲೋ ಶೋ’ ಚಿತ್ರ ನೋಡುವುದಾಗಿ ತಿಳಿಸಿದ್ದಾರೆ. ರಾಹುಲ್ ತಂದೆ ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದಾರೆ. ‘ಈ ಸಿನಿಮಾ ರಿಲೀಸ್ ಆದ ಬಳಿಕ ನಮ್ಮ ಬದುಕು ಬದಲಾಗುತ್ತದೆ’ ಎಂದು ಮಗ ಹೇಳಿದ್ದ ಮಾತನ್ನು ನೆನಪು ಮಾಡಿಕೊಂಡು ತಂದೆ ಕಣ್ಣೀರು ಹಾಕಿದ್ದಾರೆ. ಚೆಲ್ಲೋ ಶೋ ಎಂದರೆ ‘ಕೊನೆಯ ಸಿನಿಮಾ ಶೋ’ ಎಂದು ಅರ್ಥ.
