• March 17, 2026

ಮಾಲ್ಡೀವ್ಸ್ ನಲ್ಲಿ ವಿಜಯ್ ದೇವರಕೊಂಡ ಸನ್ ಗ್ಲಾಸ್ ಹಾಕಿ ಸಿಕ್ಕಿ ಬಿದ್ರಾ ರಶ್ಮಿಕಾ ಮಂದಣ್ಣ

ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಕಳೆದ ಒಂದೆರಡು ದಿನಗಳಿಂದ ಮತ್ತೆ ಸಖತ್ ಸದ್ದು ಮಾಡ್ತಿದ್ದಾರೆ. ಈ ಜೋಡಿ ಮಧ್ಯೆ ಬ್ರೇಕ್ ಅಪ್ ಆಗಿದೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೆ ಇದೀಗ ಇಬ್ಬರು ಮಾಲ್ಡೀವ್ಸ್ ನಲ್ಲಿ ಎಂಜಾಯ್ ಮಾಡ್ತಿದ್ದಾರೆ ಎನ್ನಲಾಗುತ್ತಿದೆ. ಕಳೆದ ಎರಡು ದಿನಗಳ ಹಿಂದೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಕೆಲವೇ ಕೆಲವು ಸೆಕೆಂಡ್ ಗಳ ಅಂತರದಲ್ಲಿ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಈ ಜೋಡಿಗಳು ಮಾಲ್ಡೀವ್ಸ್ ಗೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಮಾಲ್ಡೀವ್ಸ್ ನಿಂದ ರಶ್ಮಿಕಾ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದು ಅಭಿಮಾನಿಗಳು ವಿಜಯ್ ದೇವರಕೊಂಡಾರನ್ನು ಹುಡುಕುತ್ತಿದ್ದಾರೆ. ಮಾಲ್ಡೀವ್ಸ್ ಪ್ರವಾಸದಲ್ಲಿರುವ ರಶ್ಮಿಕಾ ಮಂದಣ್ಣ ನೀಲಿ ನೀರಿನ ನಡುವೆ ಕುಳಿತು ಕ್ಯಾಮೆರಾಗೆ ಫೋಸ್ ನೀಡಿದ್ದಾರೆ. ಅಲ್ಲದೆ ಈಜುಕೊಳದ ಪಕ್ಕದಲ್ಲಿ ಕುಳಿತು ತೇಲುವ ಬ್ರೇಕ್ ಫಾಸ್ಟ್ ಬಾಸ್ಕೆಟ್ ನಲ್ಲಿರುವ ಹೂವೊಂದರನ್ನು ಹಿಡಿದು ಫೋಸ್ ನೀಡಿದ್ದಾರೆ. ಫೋಟೋ ನೋಡಿದ ನೆಟ್ಟಿಗರು ರಶ್ಮಿಕಾ ಜೊತೆ ವಿಜಯ್ ಇದ್ದಾರೆ ಎನ್ನುತ್ತಿದ್ದಾರೆ. ರಶ್ಮಿಕಾ ಅವರ ಪೋಸ್ಟ್‌ ಗೆ ಸಾಕಷ್ಟು ಜನ ಕಾಮೆಂಟ್ಸ್‌ ಮಾಡಿದ್ದಾರೆ. ಅಭಿಮಾನಿಯೊಬ್ಬರು “ಈ ಚಿತ್ರವನ್ನು ವಿಜಯ್‌ ದೇವರಕೊಂಡ ಕ್ಲಿಕ್‌ ಮಾಡಿದ್ದಾರೆಯೇ” ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು “ನಾನು ವಿಜಯ್ ದೇವರಕೊಂಡ ಅವರೊಂದಿಗೆ ಅದೇ ಕನ್ನಡಕವನ್ನು ನೋಡಿದ್ದೇನೆ” ಎಂದಿದ್ದಾರೆ. ಇನ್ನೊಬ್ಬರು, ನೀವು ವಿಜಯ್ ದೇವರಕೊಂಡ ಅವರ ಕನ್ನಡಕವನ್ನು ದೋಚಿದ್ದೀರಿ ಎಂದರೆ ಮತ್ತೋರ್ವ ಅಭಿಮಾನಿ “ನಿನ್ನೆ ಏರ್‌ ಪೋರ್ಟ್‌ ನಲ್ಲಿ ಇದೇ ಸನ್‌ ಗ್ಲಾಸ್‌ ಅನ್ನು ವಿಜಯ್‌ ದೇವರಕೊಂಡ ಧರಿಸಿದ್ದನ್ನು ನೋಡಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ನಲ್ಲಿ ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ಜೋಡಿಗಳು ಇದೀಗ ಮತ್ತೆ ಸದ್ದು ಮಾಡ್ತಿದ್ದಾರೆ. ಈ ಜೋಡಿಗಳು ಮಾಲ್ಡೀವ್ಸ್ ನಲ್ಲೇ ಇದ್ದಾರಾ ಎಂಬ ಸಾವಿರಾರು ಮಂದಿಯ ಪ್ರಶ್ಮೆಗೆ ರಶ್ಮಿಕಾ ಅಥವಾ ವಿಜಯ್ ದೇವರಕೊಂಡ ಪ್ರತಿಕ್ರಿಯಿಸಲು ಹೋಗಿಲ್ಲ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now